ಇಸ್ಲಾಂ ಧರ್ಮಕ್ಕೆ ಮತಾಂತರವಾಗುವಂತೆ ಪತ್ನಿ ಒತ್ತಾಯ; ನೊಂದು ದೂರು ದಾಖಲಿಸಿದ ವ್ಯಕ್ತಿ

Share with

ಬೆಂಗಳೂರು: ಮದುವೆಯ ನಂತರ ತನ್ನ ಹೆಂಡತಿ ಇಸ್ಲಾಂ ಧರ್ಮಕ್ಕೆ ಮತಾಂತರಗೊಳ್ಳುವಂತೆ ನನಗೆ ಒತ್ತಾಯಿಸುತ್ತಿದ್ದಾಳೆ ಎಂದು ಆರೋಪಿಸಿ ಗದಗ ಜಿಲ್ಲೆಯ ವ್ಯಕ್ತಿಯೊಬ್ಬರು ದೂರು ದಾಖಲಿಸಿದ್ದಾರೆ.

ವಿಶಾಲ್ ಕುಮಾರ್ ಗೋಕವಿ ಅವರು ತಹಸೀನ್ ಹೊಸಮನಿ ಅವರೊಂದಿಗೆ ಮೂರು ವರ್ಷಗಳ ಕಾಲ ಸಂಬಂಧ ಹೊಂದಿದ್ದರು. ನಂತರ ಅವರು 2024ರ ನವೆಂಬರ್‌ನಲ್ಲಿ ವಿವಾಹ ನೋಂದಣಿ ಮಾಡಿಕೊಂಡರು. ಅದಾದ ನಂತರ, ಹೊಸಮನಿ ಅವರು ಮುಸ್ಲಿಂ ಪದ್ಧತಿಗಳ ಪ್ರಕಾರ ಮತ್ತೆ ಮದುವೆಯಾಗುವಂತೆ ಒತ್ತಡ ಹೇರಿದರು ಎಂದು ಆರೋಪಿಸಿದ್ದಾರೆ.

ಸಂಬಂಧದಲ್ಲಿ ನೆಮ್ಮದಿಯನ್ನು ಕಾಪಾಡಿಕೊಳ್ಳಲು, ಏಪ್ರಿಲ್ 25 ರಂದು ಮುಸ್ಲಿಂ ವಿಧಿವಿಧಾನಗಳ ಪ್ರಕಾರ ವಿವಾಹವಾದೆವು. ಆ ಸಮಯದಲ್ಲಿ ತನಗೆ ಅರಿವಿಲ್ಲದೆಯೇ ತನ್ನ ಹೆಸರನ್ನು ಬದಲಾಯಿಸಲಾಗಿದೆ. ಅಲ್ಲದೆ, ‘ಮೌಲ್ವಿ’ ನನಗೆ ತಿಳಿಯದೆಯೇ ನನ್ನನ್ನು ಮತಾಂತರಗೊಳಿಸಿದ್ದಾರೆ ಎಂದು ಅವರು ಹೇಳಿದ್ದಾರೆ.

ಗೋಕಾವಿ ಮುಸ್ಲಿಂ ಪದ್ಧತಿಗಳ ಪ್ರಕಾರ ಹೊಸಮನಿ ಅವರನ್ನು ಮದುವೆಯಾಗುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.

ಅದಾದ ನಂತರ, ಜೂನ್ 5 ರಂದು ಹಿಂದೂ ವಿಧಿವಿಧಾನಗಳೊಂದಿಗೆ ತಮ್ಮ ಕುಟುಂಬವು ಕೂಡ ವಿವಾಹವನ್ನು ಏರ್ಪಡಿಸಿತ್ತು. ಹೊಸಮಣಿ ಆರಂಭದಲ್ಲಿ ಇದಕ್ಕೆ ಒಪ್ಪಿಕೊಂಡಿದ್ದರು. ಆದರೆ, ಅವರ ಕುಟುಂಬದ ಒತ್ತಡದಿಂದ ನಂತರ ಹಿಂದೆ ಸರಿದರು ಎಂದು ಅವರು ಆರೋಪಿಸಿದರು.


Share with

Leave a Reply

Your email address will not be published. Required fields are marked *