ತಿರುವನಂತಪುರ: ಕೇರಳದ ತಿರುವನಂತಪುರದ ಸರಕಾರಿ ವೈದ್ಯಕೀಯ ಕಾಲೇಜಿನ ಲಿಫ್ಟ್ ನಲ್ಲಿ 2 ದಿನ ಸಿಕ್ಕಿ ಹಾಕಿಕೊಂಡಿದ್ದ ವ್ಯಕ್ತಿಯನ್ನು ರಕ್ಷಣೆ ಮಾಡಲಾಗಿದೆ. ಪ್ರಕರಣಕ್ಕೆ ಸಂಬಂಧ ಮೂವರನ್ನು ಸಸ್ಪೆಂಡ್ ಮಾಡಲಾಗಿದೆ.
ಹೊರರೋಗಿಗಳ ವಿಭಾಗಕ್ಕೆ ವೈದ್ಯ ಕೀಯ ತಪಾಸಣೆಗಾಗಿ ಬಂದಿದ್ದ ವ್ಯಕ್ತಿಯೊಬ್ಬರು ಶನಿವಾರದಿಂದ ಲಿಫ್ಟ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದರು. ಈ ಅಂಶ ವೈದ್ಯಕೀಯ ಕಾಲೇಜಿನ ಯಾರೊಬ್ಬರ ಗಮನಕ್ಕೂ ಬಂದಿರಲಿಲ್ಲ. ಸೋಮವಾರ ಲಿಫ್ಟ್ ನ ಬಳಿಗೆ ಬಂದಿದ್ದ ಕೆಲಸಗಾರನ ಮೂಲಕ ಈ ಘಟನೆ ಬೆಳಕಿಗೆ ಬಂದಿದೆ.
“ಅವರು ಮೊದಲ ಮಹಡಿಗೆ ಹೋಗಲು ಲಿಫ್ಟ್‌ಗೆ ಹತ್ತಿದರು ಆದರೆ ಲಿಫ್ಟ್ ಕೆಳಗಿಳಿದಿದೆ ಮತ್ತು ತೆರೆಯಲಿಲ್ಲ. ಸಹಾಯಕ್ಕಾಗಿ ಕೂಗಿದರು ಆದರೆ ಯಾರೂ ಬರಲಿಲ್ಲ. ಅವರ ಫೋನ್ ಸಹ ಸ್ವಿಚ್ ಆಫ್ ಆಗಿತ್ತು” ಎಂದು ಪೊಲೀಸರು ಹೇಳಿದ್ದಾರೆ.
ಲಿಫ್ಟ್ ಎರಡು ಮಹಡಿಗಳ ನಡುವೆ ಸಿಲುಕಿಕೊಂಡಿದ್ದು, ಅವರ ಫೋನ್ ಬಿದ್ದು ಒಡೆದಿತ್ತು. ಅವರು ಲಿಫ್ಟ್‌ನೊಳಗಿನ ಫೋನ್ ಬಳಸಿ ಅಲಾರಂ ಒತ್ತಿ ಮತ್ತು ಕರೆ ಮಾಡಲು ಪ್ರಯತ್ನಿಸಿದರು ಆದರೆ ಯಾರೂ ಪ್ರತಿಕ್ರಿಯಿಸಲಿಲ್ಲ ಎಂದು ಹೇಳಿದ್ದಾರೆ.