ದೂರವಾಣಿ ಮೂಲಕ ಪರಿಚಯವಾದ ಬಾಲಕಿಗೆ ಮದುವೆಯಾಗುವಂತೆ ಉಪಟಳ..; ದೂರು ದಾಖಲು

Share with

ಅಡೂರು: ದೂರವಾಣಿ ಮೂಲಕ ಪರಿಚಯಗೊಂಡ 17ರ ಹರೆಯದ ಬಾಲಕಿಯಲ್ಲಿ ನಿತ್ಯವೂ ವಿವಾಹ ವಿನಂತಿ ನಡೆಸಿ ಉಪಟಳ ನೀಡಿರುವುದಾಗಿ ದೂರಿದ ಹಿನ್ನೆಲೆಯಲ್ಲಿ ಅಡೂರು ನಿವಾಸಿ ವಿರುದ್ಧ ಪೊಲೀಸರು ಪೋಕ್ಸೋ ಪ್ರಕಾರ ಕೇಸು ದಾಖಲಿಸಿದ್ದಾರೆ. ಆದೂರು ಪೊಲೀಸ್ ಸ್ಟೇಷನ್ ವ್ಯಾಪ್ತಿಯ ನಿವಾಸಿಯಾದ ಬಾಲಕಿಯ ದೂರಿನಂತೆ 23ರ ಹರೆಯದ ಯುವಕನ ವಿರುದ್ಧ ಕೇಸು ದಾಖಲಿಸಲಾಗಿದೆ.

ಫೋನ್ ಮೂಲಕ ಬಾಲಕಿಯನ್ನು ಯುವಕ ಪರಿಚಯಗೊಂಡಿದ್ದನು ಎಂದು ಹೇಳಲಾಗಿದೆ. ಬಳಿಕ ಪ್ರತಿದಿನ ಬೆಳಿಗ್ಗೆ ಶುಭ ಮುಂಜಾನೆ, ರಾತ್ರಿ ಶುಭರಾತ್ರಿ ಸಂದೇಶಗಳನ್ನು ಕಳುಹಿಸುತ್ತಿದ್ದನೆನ್ನಲಾಗಿದೆ. ಆ ಬಳಿಕ ಸಂದೇಶದ ಸ್ವಭಾವ ಬದಲಾಗಿ ವಿವಾಹವಾಗಬೇಕೆಂದು ಆಗ್ರಹಿಸಿದ್ದು, ತನಗೆ ವಿವಾಹಕ್ಕೆ ಆಸಕ್ತಿಯಿಲ್ಲವೆಂದು ಬಾಲಕಿ ತಿಳಿಸಿದ್ದಳಾದರೂ ಯುವಕಹಿಂಜರಿಯಲಿಲ್ಲ. ಇದೇ ಉಪಟಳ ತೀವ್ರಗೊಂಡಾಗ ಬಾಲಕಿ ಆದೂರು ಪೊಲೀಸರಿಗೆ ದೂರು ನೀಡಿದ್ದಾಳೆ.


Share with

Leave a Reply

Your email address will not be published. Required fields are marked *