ಮಂಗಳೂರು ಮತ್ತು ಮಡಗಾಂವ್ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ

Share with

ಮಂಗಳೂರು: ವಂದೇ ಭಾರತ್ ಎಕ್ಸ್​ಪ್ರೆಸ್ ರೈಲು ಮಂಗಳೂರು ಮತ್ತು ಮಡಗಾಂವ್ ನಡುವೆ ಓಡಾಟ ನಡೆಸಲು ಸಜ್ಜಾಗಿದ್ದು, ಡಿ.26ರಂದು ಬೆಳಗ್ಗೆ ಪ್ರಾಯೋಗಿಕವಾಗಿ ಸಂಚಾರ ಆರಂಭಿಸಲಾಯಿತು.

ಮಂಗಳೂರು ಮತ್ತು ಮಡಗಾಂವ್ ವಂದೇ ಭಾರತ್ ರೈಲಿನ ಪ್ರಾಯೋಗಿಕ ಸಂಚಾರಕ್ಕೆ ಚಾಲನೆ

ಬೆಳಗ್ಗೆ 8.30ಕ್ಕೆ ಮಂಗಳೂರು ಸೆಂಟ್ರಲ್ ರೈಲು‌ ನಿಲ್ದಾಣದಿಂದ‌ ಈ ಪ್ರಾಯೋಗಿಕ ರೈಲು ಪ್ರಯಾಣ ಆರಂಭಿಸಿದ್ದು, ಮಧ್ಯಾಹ್ನ 1.45ಕ್ಕೆ ಮಡಗಾಂವ್ ತಲುಪಲಿದೆ. ಡಿ.26ರಂದು ಪ್ರಾಯೋಗಿಕವಾಗಿ ಸಂಚಾರ ನಡೆಸುವುದಕ್ಕೂ ಮುನ್ನವೇ ಸಂಸದ ನಳಿನ್ ಕುಮಾರ್ ಕಟೀಲ್ ಈ ರೈಲನ್ನು ಪರಿಶೀಲಿಸಿ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಮಂಗಳೂರು ಮಡಗಾಂವ್ ರೈಲು ಮಂಗಳೂರು ಸೆಂಟ್ರಲ್​ನಿಂದ ಬೆಳಗ್ಗೆ 8.30ಕ್ಕೆ ಹೊರಟು, ಮಧ್ಯಾಹ್ನ 1.05ಕ್ಕೆ ಮಡಗಾಂವ್ ತಲುಪಲಿದೆ. ಉಡುಪಿ ಮತ್ತು ಕಾರವಾರದಲ್ಲಿ ನಿಲುಗಡೆ ಇರಲಿದೆ. ಸಂಜೆ 6.10ಕ್ಕೆ ಮಡಗಾಂವ್​ನಿಂದ ಹೊರಟು ರಾತ್ರಿ‌ 10.45ಕ್ಕೆ ಮಂಗಳೂರು‌ ಸೆಂಟ್ರಲ್ ತಲುಪಲಿದೆ.


Share with

Leave a Reply

Your email address will not be published. Required fields are marked *