ಮಂಗಳೂರು: ಬೈಕ್ ಗೆ ಬಸ್ ಡಿಕ್ಕಿ; ಓರ್ವ ಸಾವು

Share with

ಮಂಗಳೂರು: ಕೂಳೂರು ಸೇತುವೆ ಬಳಿಯ ಕುದುರೆಮುಖ ಜಂಕ್ಷನ್ ಬಳಿ ದ್ವಿ-ಚಕ್ರ ವಾಹನಕ್ಕೆ ಖಾಸಗಿ ಕಾಲೇಜಿನ ಬಸ್ ವೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಓರ್ವ ಸ್ಥಳದಲ್ಲೇ ಮೃತಪಟ್ಟು, ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಶುಕ್ರವಾರ ಸಂಜೆ ನಡೆದಿದೆ ಎಂದು ವರದಿಯಾಗಿದೆ.

ದ್ವಿ-ಚಕ್ರ ವಾಹನಕ್ಕೆ ಖಾಸಗಿ ಕಾಲೇಜಿನ ಬಸ್ ವೊಂದು ಡಿಕ್ಕಿ.

ಮೃತಪಟ್ಟವರನ್ನು ಕೃಷ್ಣಾಪುರ 4ನೇ ಬ್ಲಾಕ್‌ ನಿವಾಸಿ ಬಶೀರ್‌(42) ಎಂದು ಗುರುತಿಸಲಾಗಿದ್ದು, ಅವರ ಸಹೋದರ ಆಶ್ರಫ್‌(52) ಗಂಭೀರ ಗಾಯಗೊಂಡಿದ್ದು, ನಗರದ ಆಸ್ಪತ್ರೆಗೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಬಶೀರ್‌ ಮತ್ತು ಅವರ ಅಣ್ಣ ಅಶ್ರಫ್‌ ಜೋಕಟ್ಟೆಯಿಂದ ಕುದುರೆಮುಖವಾಗಿ ಕೃಷ್ಣಾಪುರಕ್ಕೆ ತಮ್ಮ ದ್ವಿ-ಚಕ್ರ ವಾಹನದಲ್ಲಿ ಬರುತ್ತಿದ್ದ ವೇಳೆ ಕಾಲೇಜಿನ ಬಸ್‌ ಡಿಕ್ಕಿ ಹೊಡೆದು ರಸ್ತೆಗೆ ಬಿದ್ದಿದ್ದು, ಅದೇ ವೇಳೆ ವೇಗವಾಗಿ ಬಂದ ಲಾರಿ ಹರಿಯಿತು ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿ ಮಂಗಳೂರು ಉತ್ತರ ಸಂಚಾರ ವಿಭಾಗದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.


Share with

Leave a Reply

Your email address will not be published. Required fields are marked *