ಮಂಗಳೂರು: ಡಿ.10ರಂದು ಕಲಾಂಗಣದಲ್ಲಿ “ಚೆಕೊವ್ ಟು ಶಾಂಪೇನ್” ಕೊಂಕಣಿ ನಾಟಕ ಪ್ರದರ್ಶನ

Share with

ಮಂಗಳೂರು: ತನ್ನ ಸ್ವೋಪಜ್ಞತೆಯಿಂದ ಹಾಗೂ ಪ್ರೇಕ್ಷಕರಿಗೆ ಸವಾಲು ಒಡ್ಡುವ ನಾವಿನ್ಯತೆಯಿಂದ ಪ್ರಸಿದ್ಧಿ ಪಡೆದ ರಷ್ಯಾದ ನಾಟಕಕಾರ ಮತ್ತು ಕತೆಗಾರ ಆಂಟನ್ ಪಾವ್ಲೊವಿಚ್ ಚೆಕೊವ್ (1860–1904) ಇವರ ಕತೆಗಳ ಮೇಲಿನ ಪ್ರಯೋಗ `ಚೆಕೊವ್ ಟು ಶಾಂಪೇಯ್ನ್’ ನಾಟಕ ರೂಪದಲ್ಲಿ ಕೊಂಕಣಿಯಲ್ಲಿ ಪ್ರಯೋಗ ಗೊಳ್ಳಲಿದೆ. ಡಿಸೆಂಬರ್ 10ರಂದು ಸಂಜೆ 6.30 ಗಂಟೆಗೆ ಶಕ್ತಿನಗರದ ಕಲಾಂಗಣದಲ್ಲಿ ನಾಟಕ ರೆಪರ್ಟರಿ ಕಲಾಕುಲ್ ಈ ಪ್ರದರ್ಶನ ನಡೆಸಲಿದೆ.

ಕೊಂಕಣಿ ನಾಟಕ "ಚೆಕೊವ್ ಟು ಶಾಂಪೇನ್" ಡಿಸೆಂಬರ್ 10ರಂದು ಭಾನುವಾರ ಸಂಜೆ 6:30ಕ್ಕೆ ಮಂಗಳೂರಿನ ಶಕ್ತಿನಗರದಲ್ಲಿರುವ ಕಲಾಂಗಣಾದಲ್ಲಿ ಪ್ರದರ್ಶನ ಕಾಣಲಿದೆ.

ಹೇಮ ಪಟ್ಟಣಶೆಟ್ಟಿ ಕನ್ನಡದಲ್ಲಿ ಬರೆದ ನಾಟಕವನ್ನು ಅರುಣ್ ರಾಜ್ ರೊಡ್ರಿಗಸ್ ಕೊಂಕಣಿಗೆ ಭಾಷಾಂತರಿಸಿದ್ದು, ವಿದ್ದು ಉಚ್ಚಿಲ್ ಹಾಗೂ ಜೀವನ್ ಸಿದ್ದಿ ನಿರ್ದೇಶನ ನೀಡಿದ್ದಾರೆ. ಅಶ್ವಿನ್ ಕುಲಾಸೊ ಸಂಗೀತ ನೀಡಿದ್ದು, ಆಮ್ರಿನ್ ಕಲಾಕುಲ್ ರಂಗ ವಿನ್ಯಾಸ ಮತ್ತು ಸವಿತಾ ಕಲಾಕುಲ್ ವಸ್ತ್ರ ವಿನ್ಯಾಸ ಮಾಡಿದ್ದಾರೆ. ಏಂಜಲ್ಸ್ ಸೌಂಡ್ಸ್ ನ ಕಿಂಗ್ಸ್ ಲೀ ನಜರೆತ್ ಧ್ವನಿ-ಬೆಳಕು ನಿರ್ವಹಣೆ ಮಾಡಲಿದ್ದಾರೆ.

ಈ ನಾಟಕದಲ್ಲಿ ಕಲಾಕುಲ್ ವಿದ್ಯಾರ್ಥಿಗಳಾದ ವಿನ್ಸನ್ ಕಿರೆಂ, ವೆನಿಶಾ ಗುರುಪುರ, ಡಾರ್ವಿನ್ ವಾಮಂಜೂರು, ಜೊಯ್ಸನ್ ತಲಪಾಡಿ, ಅನಿತಾ ಆಲ್ಲಿಪಾದೆ, ವಿಶಾಲ್ ಬೊರಿಮಾರ್, ಪ್ರಜ್ವಲ್ ವಾಮಂಜೂರು, ವರ್ಷಿತಾ ಕುಲಶೇಖರ ಹಾಗೂ ವಿಕಾಸ್ ಕಲಾಕುಲ್, ಸಂದೀಪ್ ಕಲಾಕುಲ್ ಮತ್ತು ರೊಮಾರಿಯೊ ಪಿಂಟೊ ನಟಿಸಿದ್ದಾರೆ.

ಈ ಸಾಲಿನ ಕಲಾಕುಲ್ ರೆಪರ್ಟರಿಯನ್ನು ಅನಿವಾಸಿ ಭಾಷಾಭಿಮಾನಿ ನೆಲ್ಸನ್ ರೊಡ್ರಿಕ್ಸ್ ಪ್ರಾಯೋಜಿಸಿದ್ದಾರೆ. ನಾಟಕ ಪ್ರೇಮಿಗಳಿಗೆ ಮುಕ್ತ ಪ್ರವೇಶವಿದೆ.


Share with

Leave a Reply

Your email address will not be published. Required fields are marked *