
ಮಂಗಳೂರಿನ ಖ್ಯಾತ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞರಾದ ಡಾ.ನಿಶಿತಾ ಶೆಟ್ಟಿಯಾನ್ ಫೆರ್ನಾಂಡಿಸ್ ಅವರು ಫಿಲಿಪೈನ್ಸ್ ಮನಿಲಾದಲ್ಲಿ ನಡೆದ ಮಿಸೆಸ್ ಇಂಡಿಪೆಂಡೆಂಟ್ ಇಂಟರ್‌ನ್ಯಾಷನಲ್ ಪೇಜೆಂಟ್‌ನಲ್ಲಿ ಪ್ರಥಮ ರನ್ನರ್ ಅಪ್ ಪಟ್ಟವನು ಮುಡಿಗೇರಿಸಿಕೊಂಡಿದ್ದಾರೆ.
ನಗರದ ಏಜೆ ಹಾಗೂ ಅತೆನಾ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಮಿಸೆಸ್ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸಿದ ಮಂಗಳೂರಿನ ಪ್ರಥಮ ಮಹಿಳೆಯಾಗಿದ್ದಾರೆ. ಬೆಸ್ಟ್ ನ್ಯಾಷನಲ್ ಕಾಸ್ಟ್ಯೂಮ್ ಅವಾರ್ಡ್, ಬೆಸ್ಟ್ ಟ್ಯಾಲೆಂಟ್ ಸಬ್‌ಟೈಟಲ್‌ಗಳು ಕೂಡ ಸಿಕ್ಕಿದೆ.
ಫ್ಯಾಶನ್ ಕ್ಷೇತ್ರದಲ್ಲಿ ಅಪಾರ ಆಸಕ್ತಿ ಹೊಂದಿದ್ದು, ಈಗಾಗಲೇ 2023ರಲ್ಲಿ ನಡೆದ ಡಾಕ್ಟರ್ಸ್ ಫ್ಯಾಶನ್ ರ‌್ಯಾಂಪ್‌ನಲ್ಲಿ ವಿಜೇತರಾಗಿದ್ದು ಮಾತ್ರವಲ್ಲದೆ ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು 5ನೇ ಆವೃತ್ತಿಯ ಕಿರೀಟ ಪಡೆದುಕೊಂಡಿದ್ದಾರೆ.