ಮಂಗಳೂರು–ಮಸ್ಕತ್, ಜೆದ್ದಾ ವಿಮಾನ ಸಂಚಾರ ಆರಂಭ

Share with

ಮಂಗಳೂರು: ರವಿವಾರ ಮಂಗಳೂರು ಮತ್ತು ಮಸ್ಕತ್, ಜೆದ್ದಾ ನಡುವೆ ವಿಮಾನ ಸಂಚಾರ ಪುನರಾರಂಭಗೊಂಡಿತು.

ಮಂಗಳೂರಿನಿಂದ ಜೆದ್ದಾಕ್ಕೆ ಏರ್‌ಇಂಡಿಯಾ ಎಕ್ಸ್ ಪ್ರಸ್ 146 ಮಂದಿ ಪ್ರಯಾಣಿಕರನ್ನು ಕರೆದೊಯ್ದಿತು. ಮಂಗಳೂರಿನಿಂದ ಮಸ್ಕತ್ ಗೆ ಏರ್‌ಇಂಡಿಯಾ ಎಕ್ಸ್ ಪ್ರಸ್ 136 ಪ್ರಯಾಣಿಕರನ್ನು ಕರೆದೊಯ್ದಿತು.

ಸಂಚಾರ ರದ್ದು ಮುಂದುವರಿಕೆ

ಇಸ್ರೇಲ್-ಇರಾನ್ ಯುದ್ದದ ಹಿನ್ನೆಲೆ ಯಲ್ಲಿ ಮಂಗಳೂರು-ಗಲ್ಫ್ ರಾಷ್ಟ್ರಗಳ ನಡುವಿನ ವಿಮಾನ ಸಂಚಾರದಲ್ಲಿ ವ್ಯತ್ಯಯ ಮುಂದುವರಿದಿದ್ದು, ಬಹುತೇಕ ವಿಮಾನಗಳ ಸಂಚಾರ ರದ್ದುಗೊಂಡಿದೆ. ಮಾ.9ರ ಮಂಗಳೂರು-ಜೆದ್ದಾ (ಐಎಕ್ಸ್ 845), ಜೆದ್ದಾ-ಮಂಗಳೂರು (ಐಎಕ್ಸ್ 846), ಮಂಗಳೂರು-ದುಬೈ (ಐಎಕ್ಸ್ 831), ದುಬೈ-ಮಂಗಳೂರು(ಐಎಕ್ಸ್ 832), ಮಂಗಳೂರು-ದುಬೈ(ಐಎಕ್ಸ್ 813), ಮಾ.10ರ ದುಬೈ- ಮಂಗಳೂರು(ಐಎಕ್ಸ್ 814), ಮಾ.9ರ ಮಂಗಳೂರು -ದಮ್ಮಾಮ್ (ಐಎಕ್ಸ್ 847), ಮಾ.10ರ ದಮ್ಮಾಮ್-ಮಂಗಳೂರು(ಐಎಕ್ಸ್ 848), ಮಾ.9ರ ಮಂಗಳೂರು -ಅಬುಧಾಬಿ(ಐಎಕ್ಸ್ 815), ಮಾ.10ರ ಅಬುಧಾಬಿ -ಮಂಗಳೂರು (ಐಎಕ್ಸ್ 816) ವಿಮಾನಗಳ ಸಂಚಾರ ರದ್ದುಗೊಂಡಿದೆ.

ಜೆದ್ದಾ, ಮಸ್ಕತ್ ನಿಂದ ವಿಮಾನ ಆಗಮನ

ರವಿವಾರ ಜೆದ್ದಾದಿಂದ 175 ಪ್ರಯಾಣಿಕರನ್ನು ಹೊತ್ತ ಏರ್‌ಇಂಡಿಯಾ ಎಕ್ಸ್ ಪ್ರಸ್ ಮಂಗಳೂರಿಗೆ ಆಗಮಿಸಿತು. ಮಸ್ಕತ್ ನಿಂದ 174 ಪ್ರಯಾಣಿಕರನ್ನು ಹೊತ್ತ ವಿಮಾನ ಆಗಮಿಸಿತು. ಇಸ್ರೇಲ್ – ಇರಾನ್ ಯುದ್ಧ ಆರಂಭದ ಬಳಿಕ ಮಂಗಳೂರಿಗೆ ಜೆದ್ದಾದಿಂದ ಆಗಮಿಸಿದ ಮೊದಲ ವಿಮಾನ ಇದಾಗಿದೆ. ಮಸ್ಕತ್‌ನಿಂದ ಮಾ. 3ರಂದು ಕೂಡ ವಿಮಾನ ಆಗಮಿಸಿತ್ತು.


Share with

Leave a Reply

Your email address will not be published. Required fields are marked *