ಮಂಗಳೂರು: ಹೊಸ ವರ್ಷದ ಸಂಭ್ರಮಾಚರಣೆ; ರಂಗೇರಿದ ಸಂಭ್ರಮ

Share with

ಮಂಗಳೂರು: 2023ನೇ ವರ್ಷ ಮುಗಿದು 2024ನೇ ವರ್ಷಕ್ಕೆ ಕಾಲಿಟ್ಟಿದೆ. ಹೊಸ ವರ್ಷವನ್ನು ಎಲ್ಲೆಡೆ ಅದ್ಧೂರಿಯಾಗಿ ಸ್ವಾಗತಿಸಲಾಯ್ತು. ಮಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯನ್ನು ಅದ್ದೂರಿಯಾಗಿ ನಗರದ ಹಲವಡೆ ಆಚರಿಸಲಾಯಿತು.

ಹೊಸ ವರ್ಷದ ಸಂಭ್ರಮಾಚರಣೆ

ಮಂಗಳೂರಿನ ವಿವಿಧ ಹೋಟೆಲ್ ಪಬ್ ರೆಸಾರ್ಟ್ ಗಳಲ್ಲಿ ಅದ್ದೂರಿಯಾಗಿ ಸಂಭ್ರಮಾಚರಣೆಗೆ ವ್ಯವಸ್ಥೆ ಕಲ್ಪಿಸಲಾಗಿತ್ತು, ಮಾತ್ರವಲ್ಲದೆ ನಗರದ ಜನರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ 2024 ವರ್ಷಾಚರಣೆಯನ್ನು ಸಂಭ್ರಮಿಸಿದರು.

ಡಿ.31ರಂದು ಸಂಜೆಯಿಂದಲೇ ವಿವಿಧೆಡೆ ಸಂಗೀತ, ನೃತ್ಯ ಸಹಿತ ಮನೋರಂಜನ ಚಟುವಟಿಕೆಗಳು, ಸಂಭ್ರಮ ಕೂಟಗಳು ಆರಂಭಗೊಂಡಿದ್ದು, ಸಂಜೆ ವೇಳೆ ಬೀಚ್‌ಗಳಲ್ಲಿ ಪ್ರವಾಸಿಗರ ದಂಡು ಕಂಡು ಬಂತು.

ದೇವಸ್ಥಾನ, ಮಂದಿರಗಳಲ್ಲಿ ವಿಶೇಷ ಪೂಜೆ ನಡೆಯಿತು ಹಾಗೂ ಚರ್ಚ್‌ಗಳಲ್ಲಿ ವಿಶೇಷ ಬಲಿ ಪೂಜೆ ನಡೆಯಿತು.


Share with

Leave a Reply

Your email address will not be published. Required fields are marked *