ಮಂಗಲ್ಪಾಡಿ: ಪ್ರತಾಪನಗರ ಮಹಿಳಾ ಸಂಘದಿಂದ ಭಜನೋತ್ಸವ

Share with

ಮಂಗಲ್ಪಾಡಿ: ಶ್ರೀ ಗೌರೀ ಗಣೇಶ ಮಹಿಳಾ ಸಂಘ ಪ್ರತಾಪನಗರ ಇದರ 15ನೇ ವಾರ್ಷಿಕೋತ್ಸವದ ಅಂಗವಾಗಿ ಭಜನೋತ್ಸವ ಕಾರ್ಯಕ್ರಮ ಫೆ.25ರಂದು ಪ್ರತಾಪನಗರದ ಶ್ರೀ ಗೌರೀ ಗಣೇಶ ಭಜನಾ ಮಂದಿರದಲ್ಲಿ ನಡೆಯಿತು.

ಭಜನೋತ್ಸವ ಕಾರ್ಯಕ್ರಮ ಪ್ರತಾಪನಗರದ ಶ್ರೀ ಗೌರೀ ಗಣೇಶ ಭಜನಾ ಮಂದಿರದಲ್ಲಿ ನಡೆಯಿತು.

ಅಂದು ಮುಂಜಾನೆ ಮಹಿಳಾ ಸಂಘದಲ್ಲಿ ಗಣಹೋಮ ಬಳಿಕ ಶೇಖರ ಪೂಜಾರಿ ಮಂಗಲ್ಪಾಡಿ ಇವರು ದೀಪ ಪ್ರಜ್ವಲನೆಗೊಳಿಸಿ ಭಜನೋತ್ಸವಕ್ಕೆ ಚಾಲನೆ ನೀಡಿದರು.

ಸೂರ್ಯೋದಯದಿಂದ ಸೂರ್ಯಾಹಸ್ತದ ತನಕ ವಿವಿಧ ತಂಡದಿಂದ ಭಜನೋತ್ಸವ ನಡೆಯಿತು. ಸಂಜೆ ಮಹಿಳಾ ಸಂಘದ ಸದಸ್ಯರು ಮಂಗಳಾಚರಣೆಯನ್ನು ನಡೆಸಿದರು. ಉಪಹಾರ, ಅನ್ನದಾನ ನಡೆಯಿತು. ಕಾರ್ಯಕ್ರಮದಲ್ಲಿ ಗಣೇಶ ಮಂದಿರದ ಕಾರ್ಯಕರ್ತರು ಸಹಕರಿಸಿದರು.


Share with

Leave a Reply

Your email address will not be published. Required fields are marked *