ಮಂಜೇಶ್ವರ: ಕಳವು ಕೃತ್ಯ ವ್ಯಾಪಕಗೊಂಡಿದ್ದು, ಇದರಿಂದ ಊರವರಲ್ಲಿ ಆತಂಕಗೊಂಡಿರುವಂತೆಯೇ ಮತ್ತೊಂದು ಕಳವು ನಡೆದಿದೆ. ಮಂಗಲ್ಪಾಡಿ ಗ್ರಾಮ ಪಂಚಾಯತ್ ಕಚೇರಿಗೆ ಕಳ್ಳರು ನುಗ್ಗಿದೆ. ಆದರೆ ಯಾವುದೇ ವಸ್ತುಗಳು ಕಳವು ನಡೆದಿಲ್ಲವೆನ್ನಲಾಗಿದೆ. ಶನಿವಾರ ರಾತ್ರಿ ಕಳ್ಳರು ಪಂಚಾಯತ್ ಕಚೇರಿಯ ಮೇಲ್ಭಾಗದಲ್ಲಿರುವ ಎ.ಇ -ಎನ್.ಆರ್.ಜಿ- ಹರಿತ ಕರ್ಮ ಸೇನೆ ಕೊಠಡಿಗಳ ಬೀಗವನ್ನು ಮುರಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕೊಠಡಿಯ ಡ್ರವರ್‌ನ್ನು ಕೂಡಾ ಮುರಿಯಲಾಗಿದೆ. ಆದರೆ ಯಾವುದೇ ವಸ್ತುಗಳು ನಷ್ಟಗೊಳ್ಳಲಿಲ್ಲವೆನಲಾಗಿದೆ.
ಅಲ್ಲದೆ ಪ್ರೆಂಟ್ ಆಫೀಸ್‌ನ ಹಿಂಭಾಗದ ಕಬ್ಬಿಣದ ಬಾಗಿಲುನ್ನು ಮುರಿಯಲು ಯತ್ನಿಸಿದ್ದಾರೆ. ಆದರೆ ಮುರಿಯಲು ಸಾಧ್ಯವಾಗಲಿಲ್ಲ. ಬೀಗ ಮುರಿಯಲು ಉಪಯೋಗಿಸಿದೆನ್ನಲಾಗುತ್ತಿರುವ ಪಿಕ್ಕಾಸ್ ಹಾಗೂ ಕೈ ವರ ಹಿಂಭಾಗದಲ್ಲಿ ಪತ್ತೆಯಾಗಿದ್ದು, ಪೋಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಮಂಜೇಶ್ವರ ಪೊಲೀಸರು ತಲುಪಿ ತನಿಖೆ ನಡೆಸಿದ್ದಾರೆ. ಪಂಚಾಯತ್ ಅಧಿಕಾರಿಗಳು ಜೊತೆಯಲ್ಲಿದ್ದರು.