ಉಪ್ಪಳ: ಮಂಗಲ್ಪಾಡಿ ಸೇವಾ ಸಹಕಾರಿ ಬ್ಯಾಂಕ್‌ನ ವತಿಯಿಂದ ಕನ್ಸುಮರ್ ಫೆಡರೇಶನ್ ಸಹಯೋಗದಲ್ಲಿ ಓಣಂ ಸಂತೆಯನ್ನು ಬುಧವಾರ ಬ್ಯಾಂಕ್ ಅಧ್ಯಕ್ಷ ಪ್ರೇಮ್ ಕುಮಾರ್ ಐಲ ಇವರು ಪ್ರಥಮ ಗ್ರಾಹಕ ಬಾಲಕೃಷ್ಣ ಅಂಬಾರು ಇವರಿಗೆ ನೀಡುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಬ್ಯಾಂಕ್‌ನ ನಿರ್ಧೇಶಕರಾದ ರವೀಶ ಕೊಡಂಗೆ, ಜಯಂತ ಬಂದ್ಯೋಡು, ಸಂಜೀವ ಐತ, ಹರಿನಾಥ ಭಂಡಾರಿ ಮುಳಿಂಜ, ರಘು ಚೆರುಗೋಳಿ ಮತ್ತು ಬ್ಯಾಂಕ್‌ನ ಕಾರ್ಯದರ್ಶಿ ಬಾಲಸುಬ್ರಹ್ಮಣ್ಯ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.