Mangaluru: ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಹೊರರಾಜ್ಯದ ಯುವತಿ ಪತ್ತೆ!

Share with

ಮಂಗಳೂರು: ಮಂಗಳೂರಿನ ಹೊರವಲಯ ಕಲ್ಲಾಪು ಸಮೀಪದ ನಿರ್ಜನ ಪ್ರದೇಶದಲ್ಲಿ ಹೊರರಾಜ್ಯದ ಯುವತಿಯೊಬ್ಬಳು ಅರೆಪ್ರಜ್ಞಾವಸ್ಥೆಯಲ್ಲಿ ಪತ್ತೆಯಾಗಿದ್ದು, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರದ ಯತ್ನ ನಡೆದಿರುವ ಶಂಕೆ ವ್ಯಕ್ತವಾಗಿದೆ. ಇನ್ನು ಯುವತಿಯ ದೇಹದಾದ್ಯಂತ ಗಾಯದ ಗುರುತುಗಳು ಕಂಡುಬಂದಿದ್ದು, ಪ್ರಕರಣದ ತನಿಖೆಯನ್ನು ಉಳ್ಳಾಲ ಠಾಣಾ ಪೊಲೀಸರು ಆರಂಭಿಸಿದ್ದಾರೆ.

ಪೊಲೀಸ್ ಮೂಲಗಳ ಪ್ರಕಾರ, ತಡರಾತ್ರಿ ವೇಳೆ ಯುವತಿಯೋರ್ವಳು ನಶೆಯ ರೀತಿಯಲ್ಲಿ ಸ್ಥಳೀಯ ಮನೆಯೊಂದರ ಬಾಗಿಲು ತಟ್ಟಿ ನೀರು ಕೇಳಿದ್ದಾಳೆ. ಆದರೆ, ನೀರು ಕೇಳಿದ ಕೆಲವೇ ಕ್ಷಣಗಳಲ್ಲಿ ಆಕೆ ಪ್ರಜ್ಞೆ ತಪ್ಪಿ ಕುಸಿದು ಬಿದ್ದಿದ್ದಾಳೆ ಎನ್ನಲಾಗಿದೆ


Share with

Leave a Reply

Your email address will not be published. Required fields are marked *