
ಮಂಗಳೂರು: ಲಕ್ಷಾಂತರ ಜನರು ಸೇರುವ ಮಂಗಳೂರಿನ ಅತ್ಯದ್ಭುತ ಹಬ್ಬ ಮಂಗಳೂರು ದಸರಾ. ಈ ಹಬ್ಬದ ಮೆರವಣಿಗೆ ಭಕ್ತಿಪ್ರಧಾನವಾಗಿರಬೇಕೇ ಹೊರತು ಅಸಭ್ಯತೆಯಿಂದ ಕೂಡಿರಬಾರದು.

ಮದ್ಯಪಾನ ಸೇವಿಸಿ, ಮಾಂಸಾಹಾರ ಸೇವಿಸಿ ಶಾರದೆ, ನವ ದೇವತೆಗಳನ್ನು ಸ್ವಾಗತಿಸುವುದು ಭಕ್ತ ಸಮುದಾಯಕ್ಕೆ ಮಾಡಿದ ಅಪಮಾನವಾಗಿರುತ್ತದೆ. ನಿಯಮವನ್ನು ಪಾಲಿಸಿ ಭಾಗವಹಿಸುವಂತೆ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.




