ಮಂಗಳೂರು: ಕರಾಳಿಯಾದ್ಯಂತ ಅದ್ಧೂರಿಯಾಗಿ ರಾಪಟ ಚಲನಚಿತ್ರ ಬಿಡುಗಡೆ

Share with

ಮಂಗಳೂರು: ಕರಾಳಿಯಾದ್ಯಂತ ಅದ್ಧೂರಿಯಾಗಿ ರಾಪಟ ಚಲನಚಿತ್ರ ಬಿಡುಗಡೆ.

ಮಂಗಳೂರು: ಬೊಳ್ಳಿ ಮೂವೀಸ್ ಹಾಗೂ ಅವಿಕಾ ಪ್ರೊಡಕ್ಷನ್ಸ್ ನಿರ್ಮಾಣದ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಅವರ ಚಿತ್ರಕತೆ ಸಾಹಿತ್ಯ ಸಂಭಾಷಣೆಯಲ್ಲಿ ತಯಾರಾದ ಅರ್ಜುನ್ ಕಾಪಿಕಾಡ್ ನಿರ್ದೇಶನದ ಚೊಚ್ಚಲ ಸಿನಿಮಾ ರಾಪಟ ಡಿ.1ರಂದು ಮುಂಜಾನೆ ಕರಾಳಿಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಗೊಂಡಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಲಾಯಿತು.

ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತಾನಾಡಿದ ಡಾ.ದೇವದಾಸ್ ಕಾಪಿಕಾಡ್ ಅವರು, “ತುಳು ಭಾಷೆಯಲ್ಲಿ ಬರುವ ಎಲ್ಲಾ ಸಿನಿಮಾಗಳಿಗೂ ತುಳುವರು ಪ್ರೋತ್ಸಾಹಿಸಬೇಕು. ತುಳುವರಿಗೆ ಒಂದು ಉತ್ತಮ ಗುಣಮಟ್ಟದ ಸಿನಿಮಾ ನೀಡಬೇಕು ಎಂಬ ಉದ್ದೇಶದಿಂದ ರಾಪಟ ಸಿನಿಮಾ ಮಾಡಿದ್ದೇವೆ. ಎಲ್ಲರೂ ಪ್ರೀತಿಯಿಟ್ಟು ಸಿನಿಮಾ ಥಿಯೇಟರ್ ಗೆ ಬಂದು ಸಿನಿಮಾ ನೋಡಿದರೆ ನಮ್ಮ ಪ್ರಯತ್ನ ಸಾರ್ಥಕ” ಎಂದು ಹೇಳಿದರು.

ತುಳುನಾಡಿನ ಹಾಸ್ಯ ದಿಗ್ಗಜರು ಚಿತ್ರದಲ್ಲಿ ನಟಿಸಿದ್ದು, ತಾಂತ್ರಿಕ ವಿಭಾಗದಲ್ಲೂ ಅನುಭವಿ ತಂಡ ಕೆಲಸ ಮಾಡಿದೆ. ‘ರಾಪಟ’ ಸಿನಿಮಾ ಹಾಸ್ಯ-ಮನರಂಜನೆಯ ವಿಭಿನ್ನವಾದ ಕಥಾ ಹಂದರವನ್ನು ಹೊಂದಿದೆ. ಈ ಚಿತ್ರದಲ್ಲಿ ಖ್ಯಾತ ಕಲಾವಿದರು ಅಭಿನಯಿಸಿದ್ದು, ಅನೂಪ್ ಸಾಗರ್ ಅವರು ನಾಯಕ ನಟನಾಗಿ ಹಾಗೂ ನಿರೀಕ್ಷ ಶೆಟ್ಟಿ ಅವರು ನಾಯಕಿಯಾಗಿ ಅಭಿನಯಿಸಿದ್ದಾರೆ.

ತುಳು ಚಿತ್ರರಂಗದ ದಿಗ್ಗಜರಾದ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಸಾಯಿ ಕೃಷ್ಣ ಕುಡ್ಲ, ದೀಪಕ್ ರೈ ಪಾಣಾಜೆ, ರೂಪಶ್ರೀ ವರ್ಕಾಡಿ, ಪ್ರಕಾಶ್ ತೂಮಿನಾಡು, ವಿಕೀಶಾ, ರವಿರಾಮ ಕುಂಜ ಮುಂತಾದವರು ನಟಿಸಿದ್ದು, ಸಹ ನಿರ್ದೇಶಕರಾಗಿ ಶನಿಲ್ ಗುರು, ಸಿನಿಮಾಟೋಗ್ರಾಫರ್ ಆಗಿ ಸಚಿನ್ ಎಸ್.ಶೆಟ್ಟಿ, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಸಂದೀಪ್ ಶೆಟ್ಟಿ, ಎಡಿಟರ್ ಯಶ್ವಿನ್ ಕೆ ಶೆಟ್ಟಿಗಾರ್, ಸಂಗೀತ ಪ್ರಸಾದ್ ಕೆ ಶೆಟ್ಟಿ, ನಿರ್ಮಾಪಕರಾಗಿ ಸಂತೋಷ್ ಸುವರ್ಣ, ಸೂರ್ಯಕಾಂತ್ ಸುವರ್ಣ, ರಾಜನ್ ರಾಕೇಶ್ ಶೆಟ್ಟಿ, ಆಶಿಕಾ ಸುವರ್ಣ, ದೇವಿಕಾ ಆಚಾರ್ಯ, ಶೈಲರಾಜ್ ಪೂಜಾರಿ, ಅಭಿ ಶೆಟ್ಟಿ, ಮನೋಜ್‌ ಶೆಟ್ಟಿ, ಯಕ್ಷಿತ್ ಶೆಟ್ಟಿ ಮತ್ತು ಮಧು ಕುಮಾರ್ ಕಾರ್ಯನಿರ್ವಹಿಸಿದ್ದಾರೆ.

ವೇದಿಕೆಯಲ್ಲಿ ಶರ್ಮಿಳಾ ಕಾಪಿಕಾಡ್, ಚಿತ್ರ ನಿರ್ದೇಶಕ ಅರ್ಜುನ್ ಕಾಪಿಕಾಡ್, ಕಾರ್ಪೋರೇಟರ್ ಕಿರಣ್ ಕೋಡಿಕಲ್, ಚಿತ್ರ ವಿತರಕ ಸಚಿನ್ ಎ.ಎಸ್‌. ಉಪ್ಪಿನಂಗಡಿ, ಕೆಮರಾ ಮ್ಯಾನ್ ಸಚಿನ್ ಶೆಟ್ಟಿ, ಶನಿಲ್‌ ಗುರು, ಚಿತ್ರ ನಿರ್ಮಾಪಕ ಹರೀಶ್ ಶೇರಿಗಾರ್, ತುಳು ಚಲನ ಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಆರ್. ಧನರಾಜ್, ಭೋಜರಾಜ್ ವಾಮಂಜೂರ್, ಅನೂಪ್ ಸಾಗರ್, ನಿರೀಕ್ಷಾ ಶೆಟ್ಟಿ, ಕಾವ್ಯ ಅರ್ಜುನ್ ಕಾಪಿಕಾಡ್, ದಿವ್ಯಾ ಸಚಿನ್‌ ಶೆಟ್ಟಿ, ಅನಿಲ್ ರಾಜ್ ಉಪ್ಪಳ, ಯತೀಶ್ ಬೈಕಂಪಾಡಿ, ಪತ್ರಕರ್ತ ಬಾಳ ಜಗನ್ನಾಥ ಶೆಟ್ಟಿ, ಸಂತೋಷ್ ಸುವರ್ಣ, ಚಿತ್ರದ ನಿರ್ಮಾಪಕಿ ಆಶಿಕಾ ಸುವರ್ಣ, ದಿನೇಶ್‌ ಶೆಟ್ಟಿ, ಹರಿ, ಕಿಶೋರ್ ಕೊಟ್ಟಾರಿ, ಅಶ್ವಿತ್ ಕೊಟ್ಟಾರಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಲಕ್ಷ್ಮೀಶ ಸುವರ್ಣ ಅವರು ಕಾರ್ಯಕ್ರಮವನ್ನು ನಿರ್ವಹಿಸಿದರು.


Share with

Leave a Reply

Your email address will not be published. Required fields are marked *