ಮಂಗಳೂರು: ಬಾಲಕರ ಪೋಷಕರ ಪತ್ತೆಗೆ ಮನವಿ

Share with

ಮಂಗಳೂರು: ಇಬ್ಬರು ಬಾಲಕರ ಪೋಷಕರ ಪತ್ತೆಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಯವರು ಮನವಿ ಮಾಡಿದ್ದಾರೆ.

ಮಂಗಿಲಪದವು ಎಂಬಲ್ಲಿ ಬುಲಾಬ್ (9 ವರ್ಷ) ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಣಿ

ಬಂಟ್ವಾಳ ತಾಲೂಕಿನ ವಿಟ್ಲ ಗ್ರಾಮದ ಮಂಗಿಲಪದವು ಎಂಬಲ್ಲಿ ಬುಲಾಬ್ (9 ವರ್ಷ) ಹಾಗೂ ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಣಿ (9 ವರ್ಷ) ಎಂಬ ಬಾಲಕರು ಪತ್ತೆಯಾಗಿದ್ದ ಇವರ ವಿವರ ತಿಳಿದುಬಂದಿಲ್ಲ. ಈ ಬಾಲಕರನ್ನು ಮಕ್ಕಳ ಕಲ್ಯಾಣ ಸಮಿತಿ ಆದೇಶದ ಪ್ರಕಾರ ಸರಕಾರಿ ಬಾಲಕರ ಬಾಲಮಂದಿರ, ಬೋಂದೆಲ್ ಇಲ್ಲಿ ದಾಖಲಿಸಲಾಗಿದೆ.

ಬಾಲಕರ ವಾರಸುದಾರರು ಯಾರಾದರೂ ಇದ್ದಲ್ಲಿ 120 ದಿನದೊಳಗೆ ಸೂಕ್ತ ದಾಖಲೆಗಳೊಂದಿಗೆ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕ, 1ನೇ ಮಹಡಿ, ಜಿಲ್ಲಾಧಿಕಾರಿಗಳ ಕಚೇರಿ, ದಕ್ಷಿಣ ಕನ್ನಡ ಜಿಲ್ಲೆ, ಮಂಗಳೂರು 575001, ದೂರವಾಣಿ ಸಂಖ್ಯೆ: 0824-2440004 ಅನ್ನು ಸಂಪರ್ಕಿಸಬಹುದು ಎಂದು ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Share with

Leave a Reply

Your email address will not be published. Required fields are marked *