Mangaluru: ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಕಂಡಕ್ಟರ್‌ನಿಂದ ಯುವತಿಗೆ ಲೈಂಗಿಕ ಕಿರುಕುಳ

Share with

ಮಂಗಳೂರು: ನಿರ್ವಾಹಕನೊಬ್ಬ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ಮಂಗಳೂರಿನ ಮುಡಿಪು-ಸ್ಟೇಟ್‌ಬ್ಯಾಂಕ್‌ ಭಾಗದ ಕೆಎಸ್‌ಆರ್‌ಟಿಸಿ ಬಸ್ಸಿನಲ್ಲಿ ನಡೆದಿದೆ.

ಪ್ರಯಾಣಿಕರೊಬ್ಬರು ಈ ಟಘನೆಯ ವಿಡಿಯೋ ಮಾಡಿದ್ದು, ಇದು ವೈರಲ್‌ ಆಗಿದೆ. ಕೂಡಲೇ ಎಚ್ಚೆತ್ತುಕೊಂಡಿರುವ ಪೊಲೀಸರು ಆರೋಪಿ ಬಾಗಲಕೋಟೆ ಮೂಲದ ಪ್ರದೀಪ್‌ (40) ನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಮುಡಿಪುವಿನಿಂದ ಸ್ಟೇಟ್‌ಬ್ಯಾಂಕ್‌ನತ್ತ ತೆರಳುತ್ತಿದ್ದ ಬಸ್ಸಿನಲ್ಲಿ ಎ.22 ರಂದು ನಡೆದಿದೆ. ಬಸ್‌ನಲ್ಲಿ ಯುವತಿ ನಿದ್ರೆಗೆ ಜಾರಿದ್ದು, ಆ ಸಂದರ್ಭದಲ್ಲಿ ಕಂಡಕ್ಟರ್‌ ಯುವತಿಗೆ ಕಿರುಕುಳ ನೀಡಿದ್ದಾನೆ.


Share with

Leave a Reply

Your email address will not be published. Required fields are marked *