ಮಾಣಿ : ಇಲ್ಲಿನ ದಾರುಲ್ ಇರ್ಶಾದ್ ಎಜ್ಯುಕೇಶನಲ್ ಸೆಂಟರ್ ವತಿಯಿಂದ ಪ್ರತೀ ವರ್ಷ ನಡೆಯುವ ಬೃಹತ್ ಅಜ್ಮೀರ್ ಮೌಲಿದ್ ಮತ್ತು ಏರ್ವಾಡಿ ಶುಹದಾ ನೇರ್ಚೆ ಕಾರ್ಯಕ್ರಮವು ಜನವರಿ 7 ಮಂಗಳವಾರ ಮಿತ್ತೂರು ಕೆಜಿಎನ್ ಕ್ಯಾಂಪಸ್ ಗ್ರೌಂಡ್ ನಲ್ಲಿ ನಡೆಯಲಿದೆ.ಅಂದು ಬೆಳಿಗ್ಗೆ 6 ಗಂಟೆಗೆ ಆರಂಭಗೊಳ್ಳುವ ಕಾರ್ಯಕ್ರಮವು ಖತ್ಮುಲ್ ಕುರ್‌ಆನ್,ಏರ್ವಾಡಿ ನೇರ್ಚೆ,ಅಜ್ಮೀರ್ ಖ್ವಾಜಾ ಅನುಸ್ಮರಣೆ,ಮತ್ತು ಪೇರೋಡ್ ಉಸ್ತಾದರ ಪ್ರಭಾಷಣ ಮುಂತಾದ ಕಾರ್ಯಕ್ರಮಗಳೊಂದಿಗೆ ಮಧ್ಯಾಹ್ನ ಸಮಾಪ್ತಿಗೊಳ್ಳಲಿದೆ,ಖಾಝಿ ಝೈನುಲ್ ಉಲಮಾ ಮಾಣಿ ಉಸ್ತಾದ್,ಸಯ್ಯಿದ್ ಸ್ವಲಾಹುದ್ದೀನ್ ಅಲ್ ಅದನಿ ತಂಙಳ್ ಸಹಿತ ನೂರಾರು ಉಲಮಾ ಉಮರಾ ಸಯ್ಯಿದ್‌ಗಳು ರಾಜಕೀಯ ನೇತಾರರು ಭಾಗವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.