Manipal: ರೆಸ್ಟೋರೆಂಟ್ ನಲ್ಲಿ ಆಕಸ್ಮಿಕ ಅಗ್ನಿ..! ಸಿಲಿಂಡರ್ ಸ್ಪೋಟ..!!

Share with

ಮಣಿಪಾಲ: ಇಲ್ಲಿನ ಆರ್ ಎಸ್ ಬಿ ಸಭಾಭವನದ ಪಕ್ಕದಲ್ಲಿರುವ ಡೆಲ್ಲಿ ಡಾಭಾ ರೆಸ್ಟೋರೆಂಟ್ ನಲ್ಲಿ ಅಗ್ನಿ ಆಕಸ್ಮಿಕ ಉಂಟಾಗಿ ಸಿಲಿಂಡ‌ರ್ ಸ್ಪೋಟಗೊಂಡ ಘಟನೆ ಗುರುವಾರ (ನ.27) ಸಂಜೆ ನಡೆದಿದೆ.

ಬೆಂಕಿಯ ಕೆನ್ನಾಲಿಗೆ ಪಕ್ಕದ ಅಂಗಡಿಗೂ ವ್ಯಾಪಿಸಿದ್ದು, ಅಗ್ನಿಶಾಮದ ದಳ ಬೆಂಕಿ ನಂದಿಸುತ್ತಿದೆ.

ಕೆಲವೇ ನಿಮಿಷಗಳ ಅಂತರದಲ್ಲಿ ಎರಡು ಸಿಲಿಂಡರ್‌ ಸ್ಪೋಟವಾಗಿದೆ. ಘಟನೆಯಲ್ಲಿ ಯಾವುದೇ ಜೀವಹಾನಿ ಉಂಟಾಗಿಲ್ಲ ಎಂದು ವರದಿಯಾಗಿದೆ.

ಹೋಟೆಲ್ ಪಕ್ಕದಲ್ಲಿ ಪಾರ್ಕ್ ಮಾಡಲಾಗಿದ್ದ ಕಾರಿಗೆ ಹಾನಿಯಾಗಿದೆ. ಸ್ಪೋಟದ ತೀವ್ರತೆಗೆ ಪಕ್ಕದ ಹೋಟೆಲ್ ಗೂ ಹಾನಿಯಾಗಿದೆ. ಘಟನೆಯ ಬಗ್ಗೆ ಉಡುಪಿ ಎಸ್ ಪಿ ಮಾಹಿತಿ ನೀಡಿದ್ದು, ಮಣಿಪಾಲದಲ್ಲಿರುವ ಡೆಲ್ಲಿ ಡಾಬಾ ರೆಸ್ಟೋರೆಂಟ್‌ನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿದೆ. ಡಾಬಾದ ಒಳಗಿದ್ದ ಎರಡು ಗ್ಯಾಸ್‌ ಸಿಲಿಂಡರ್‌ಗಳು ಸ್ಫೋಟಗೊಂಡಿವೆ. ಅಗ್ನಿಶಾಮಕ ದಳ ಮತ್ತು ಪೊಲೀಸರು ಈಗಾಗಲೇ ಪರಿಶೀಲಿಸಿದ್ದಾರೆ. ಯಾರಿಗೂ ಗಾಯಗಳಾಗಿಲ್ಲ. ಯಾವುದೇ ವದಂತಿಗಳು ಹರಡಬೇಡಿ ಎಂದಿದ್ದಾರೆ.


Share with

Leave a Reply

Your email address will not be published. Required fields are marked *