ಮಣಿಪಾಲ: ಪ್ರೊ| ಡಾ| ಅಲೆಕ್ಸ್‌ ಜೋಸೆಫ್ ಹೃದಯಾಘಾತದಿಂದ ಮೃತ್ಯು

Share with

ಮಣಿಪಾಲ: ಮಣಿಪಾಲ ಫಾರ್ಮಾಸ್ಯುಟಿಕಲ್‌ ಸೈನ್ಸ್‌ ಕಾಲೇಜಿನ ಪ್ರೊ|ಡಾ| ಅಲೆಕ್ಸ್‌ ಜೋಸೆಫ್ (47) ಹೃದಯಾಘಾತದಿಂದ ಡಿ.19ರಂದು ಮೃತಪಟ್ಟಿದ್ದಾರೆ.

ಮಣಿಪಾಲ ಫಾರ್ಮಾಸ್ಯುಟಿಕಲ್‌ ಸೈನ್ಸ್‌ ಕಾಲೇಜಿನ ಪ್ರೊ|ಡಾ| ಅಲೆಕ್ಸ್‌ ಜೋಸೆಫ್

ಇವರು ತನ್ನ ಪತ್ನಿ ಅದೇ ಕಾಲೇಜಿನ ಸಹಾಯಕ ಪ್ರೊ.ಎಂಜೆಲ್ ಟ್ರೀಸಾ ಅಲೆಕ್ಸ್ ಜೊತೆ ಬೆಳಗ್ಗೆ ಕಾಲೇಜಿಗೆ ತೆರಳಿದ್ದರು. ಕಾಲೇಜಿನಲ್ಲಿರುವ ವೇಳೆ ಡಾ|ಅಲೆಕ್ಸ್ ಜೋಸೆಫ್ ಅವರಿಗೆ ವಿಪರೀತ ಎದೆ ನೋವು ಕಾಣಿಸಿಕೊಂಡಿದ್ದು ತಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಪರೀಕ್ಷಿಸಿದ ವೈದ್ಯರು ಅಲೆಕ್ಸ್ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Share with

Leave a Reply

Your email address will not be published. Required fields are marked *