ಮಣಿಯಂಪಾರೆ ಚರ್ಚಿನ ನಾಟಕದ ಆಮಂತ್ರಣ ಪತ್ರಿಕೆ ಬಿಡುಗಡೆ

Share with

ಪೆರ್ಲ: ಮಣಿಯಂಪಾರೆ ಸಂತ ಲಾರೆನ್ಸರ ಚರ್ಚಿನ ಅಭಿವೃದ್ಧಿ ಕಾರ್ಯದಂಗವಾಗಿ ಫೆ.4ರಂದು ಆಯೋಜಿಸಿದ ಚಾಪರ್ಕ ಕಲಾವಿದರ “ಪುದರ್ ದೀದಾಂಡ್” ನಾಟಕದ ಆಮಂತ್ರಣ ಪತ್ರಿಕೆಯನ್ನು ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗಡಿನಾಡ ಕನ್ನಡಿಗ ಅಬ್ದುಲ್ಲ ಮಾದುಮೂಲೆ ಅವರು ಬಿಡುಗಡೆಗೊಳಿಸಿದರು.

"ಪುದರ್ ದೀದಾಂಡ್" ನಾಟಕದ ಆಮಂತ್ರಣ ಪತ್ರಿಕೆಯನ್ನು ಗಡಿನಾಡ ಕನ್ನಡಿಗ ಅಬ್ದುಲ್ಲ ಮಾದುಮೂಲೆ ಅವರು ಬಿಡುಗಡೆಗೊಳಿಸಿದರು.

ಚರ್ಚಿನ ಪಾಧರ್ ನೇಲ್ಸನ್ ಡಿ’ಆಲ್ಮೇಡಾ, ಚರ್ಚ್ ಪಾಲನ ಸಮಿತಿ ಉಪಾಧ್ಯಕ್ಷ ವಿಲ್ಸನ್ ಡಿಸೋಜ, ಕೆಥೋಲಿಕ್ ಸಭಾದ ಜಿಲ್ಲಾಧ್ಯಕ್ಷ ರಾಜು ಜೋನ್ ಡಿಸೋಜ, ಘಟಕಾಧ್ಯಕ್ಷ ಅಮೃತ್ ಲಾಲ್ ಡಿಸೋಜ, ರೋಹನ್ ಮಣಿಯಂಪಾರೆ ಮೊದಲಾದವರು ಉಪಸ್ಥಿತರಿದ್ದರು‌. ಈ ಸಂದರ್ಭದಲ್ಲಿ ದ.ಕ ರಾಜ್ಯೋತ್ಸವ ಪುರಸ್ಕೃತರಾದ ಅಬ್ದುಲ್ಲ ಮಾದುಮೂಲೆಯವರನ್ನು ಚರ್ಚಿನ ಪರವಾಗಿ ಸನ್ಮಾನಿಸಲಾಯಿತು.


Share with

Leave a Reply

Your email address will not be published. Required fields are marked *