ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಸಮುದಾಯ ಮತ್ತು ಅಭಿವೃದ್ಧಿ ವಿಭಾಗದಿಂದ ಯೋಜನೆಯ ಸಾಲೆತ್ತೂರು ವಲಯದ ಮಂಚಿ ನೂಜಿ ಗೋವರ್ಧನ ಗಿರಿಯ ಶ್ರೀ ಕೃಷ್ಣ ಮಂದಿರಕ್ಕೆ ಮಂಜೂರಾದ ಒಂದು ಲಕ್ಷ ಮೊತ್ತದ ಮಂಜೂರಾತಿ ಪತ್ರ ವನ್ನು ವಿಟ್ಲ ತಾಲೂಕಿನ ಯೋಜನಾಧಿಕಾರಿ ರಮೇಶ್ ರವರು ಗೋವರ್ಧನ ಗಿರಿಯ ಕೃಷ್ಣ ಮಂದಿರದ ಅಧ್ಯಕ್ಷ ಮೋಹನದಾಸ್ ಶೆಟ್ಟಿ ಪುದೋಟ್ಟು ಯವರಿಗೆ ಹಸ್ತಾಂತರ ಮಾಡಿದರು.
ಈ ಸಂದರ್ಭದಲ್ಲಿ ಮಂಚಿ ಒಕ್ಕೂಟ ಅಧ್ಯಕ್ಷರ ದಿವಾಕರ ನಾಯಕ್. ಅರ್ಚಕರಾದ ಜಯದೇವ ಭಟ್,ಒಕ್ಕೂಟ ಸ್ಥಾಪಕ ಅಧ್ಯಕ್ಷ ಗೋವಿಂದ ನಾಯಕ್, ಸಾಲೆತ್ತೂರು ವಲಯ ಮೇಲ್ವಿಚಾರಕಿ ಸವಿತಾ. ಸೇವಾಪ್ರತಿನಿಧಿ ಚಂಚಲಾಕ್ಷಿ,ಎಕನಾಥ, ಕೃಷ್ಣ ಮಂದಿರದ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು .