ಮಂಜೇಶ್ವರ: ಅಪಘಾತ ತಪ್ಪಿಸಲು ರಸ್ತೆ ಬದಿಗೆ ಮಣ್ಣು ಹಾಕಿಸಿ ಬುಲ್ಡೋಜರಿನಿಂದ ರಸ್ತೆ ಸಮತಟ್ಟು ಮಾಡಿ ಪಂ.ಜನಪ್ರತಿನಿಧಿಗಳಿಗೆ ಸವಾಲೆಸೆದು ವೈರಲ್ ಆದ ಲಾರಿ ಚಾಲಕ

Share with

ಮಂಜೇಶ್ವರ: ‘ನನಗಲ್ಲ, ನಮಗೆ’ ಎಂಬ ಸಾಮಾಜಿಕ ಒಗ್ಗಟ್ಟು ಸಾರುವ ಸಂದೇಶವನ್ನು ನಾವು ಕೇಳಿರುತ್ತೇವೆ. ನಾವು ‘ನನಗಾಗಿ’ ಬದುಕುವುದಕ್ಕಿಂತ ‘ನಮಗಾಗಿ’ ಬದುಕಿದಾಗ ಸಮಾಜ ನಮ್ಮನ್ನು ಸದಾ ನೆನೆಯುತ್ತದೆ.

ರಸ್ತೆ ಬದಿಗೆ ಮಣ್ಣು ಹಾಕಿಸಿ ಬುಲ್ಡೋಜರಿನಿಂದ ರಸ್ತೆ ಸಮತಟ್ಟು

ಇದರಂತೆ ತೂಮಿನಾಡಿನ ಲಾರಿ ಚಾಲಕರೊಬ್ಬರು ತೂಮಿನಾಡು ಪದವು ಕಾಂಕ್ರೀಟ್ ರಸ್ತೆಯ ಇಕ್ಕೆಲಗಳಲ್ಲಿ ಆಳವಾದ ಅಂತರಗಳು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ದ್ವಿಚಕ್ರ ವಾಹನ ಸವಾರರು ಆಗಾಗ ಅಪಘಾತಕ್ಕೀಡಾಗುತಿದ್ದರು. ಇದನ್ನು ಸರಿ ಮಾಡಬೇಕಾದದ್ದು ಪಂಚಾಯತು ಅಧಿಕಾರಿಗಳು ಅಥವಾ ಜನಪ್ರತಿನಿಧಿಗಳು.

ರಸ್ತೆ ಬದಿಗೆ ಮಣ್ಣು ಹಾಕಿಸಿ ಬುಲ್ಡೋಜರಿನಿಂದ ರಸ್ತೆ ಸಮತಟ್ಟು ಮಾಡಿ ಪಂ.ಜನಪ್ರತಿನಿಧಿಗಳಿಗೆ ಸವಾಲೆಸೆದು ವೈರಲ್ ಆದ ಲಾರಿ ಚಾಲಕ

ಇವರು ಜಾಣ ಕುರುಡುತನವನ್ನು ಪ್ರದರ್ಶಿಸುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ನಿವಾಸಿ ಲಾರಿ ಚಾಲಕರಾಗಿರುವ ನಾರಾಯಣ ಎಂಬವರು ತನಗೆ ಸಿಗುವ ಸಂಬಳದಿಂದ ಟಿಪ್ಪರ್ ಲಾರಿಯಲ್ಲಿ ಅಂತರವಿರುವ ಸ್ಥಳಕ್ಕೆ ಟಿಪ್ಟರ್ ಲಾರಿಯಲ್ಲಿ ಮಣ್ಣು ಹಾಕಿಸಿ ಬುಲ್ಡೋಜರಿನಿಂದ ರಸ್ತೆ ಸಮತಟ್ಟು ಮಾಡಿ ಮಾದರಿಯಾಗಿದ್ದಾರೆ.

ಇವರ ಸೇವೆ ನಾಗರೀಕ ವಲಯದಲ್ಲಿ ಭಾರೀ ಸದ್ದು ಮಾಡಿ ನಾರಾಯಣರವರು ಸದ್ದಿಲ್ಲದೆ ಸುದ್ದಿಯಾಗಿದ್ದಾರೆ. ಯುವ ಸಮಾಜಕ್ಕೆ ಸಮಾಜದ ಮೇಲಿನ ಕಾಳಜಿ ಹಾಗೂ ಸೇವಾ ಮನೋಭಾವನೆಯನ್ನು ರೂಡಿಸಿಕೊಳ್ಳಲು ಇಂತಹ ಸೇವೆಗಳು ಪ್ರೋತ್ಸಾಹ ನೀಡುತ್ತಿರುವುದಾಗಿ ಜನರು ಆಡಿ ಕೊಳ್ಳುತಿದ್ದಾರೆ.


Share with

Leave a Reply

Your email address will not be published. Required fields are marked *