ಮಂಜೇಶ್ವರ: ಮೀನು ಕಾರ್ಮಿಕ ರೋಷನ್ ಮೊಂತೆರೋ ನಿಗೂಢವಾಗಿ ನಾಪತ್ತೆ; ಮುಂದುವರಿದ ಶೋಧ

Share with

ಮಂಜೇಶ್ವರ: ಊಟ ಮಾಡಿ ಮನೆಯಲ್ಲಿದ್ದ ವ್ಯಕ್ತಿ ರಾತ್ರಿ ನಿಗೂಢವಾಗಿ ನಾಪತ್ತೆಯಾದ ಘಟನೆ ನಡೆದಿದ್ದು, ಊರವರು ಒಟ್ಟು ಸೇರಿ ಹುಡುಕಾಟ ನಡೆಸಿದರು ಯಾವುದೇ ಸುಳಿವು ಇಲ್ಲ.

ಮಂಜೇಶ್ವರ ಚರ್ಚ್ ಬೀಚ್ ರಸ್ತೆಯ ನಿವಾಸಿ [ದಿ] ಫೆಲಿಕ್ಸ್ ಮೊಂತೆರೋರವರ ಪುತ್ರ ರೋಷನ್ ಮೊಂತೆರೋ .

ಮಂಜೇಶ್ವರ ಚರ್ಚ್ ಬೀಚ್ ರಸ್ತೆಯ ನಿವಾಸಿ [ದಿ] ಫೆಲಿಕ್ಸ್ ಮೊಂತೆರೋರವರ ಪುತ್ರ ರೋಷನ್ ಮೊಂತೆರೋ [42] ನಾಪತ್ತೆಯಾಗಿದ್ದಾರೆ. ಇವರು ಸಮುದ್ರದಲ್ಲಿ ಮೀನುಗಾರಿಕೆ ಮಾಡುವ ಕೆಲಸವನ್ನು ಮಾಡುತ್ತಿದ್ದಾರೆ.

ಇವರು ನ.18ರಂದು ರಾತ್ರಿ ಊಟ ಮಾಡಿ ಮನೆಯಲ್ಲಿದ್ದರು ರಾತ್ರಿ ಸುಮಾರು 11:45ರ ವೇಳೆ ಇವರು ನಾಪತ್ತೆಯಾಗಿದ್ದರು ಮೊಬೈಲ್ ಹಾಗೂ ಚಪ್ಪಲಿ ಮನೆಯಲ್ಲಿತ್ತು. ಈ ಬಗ್ಗೆ ನ.19ರಂದು ಬೆಳಿಗ್ಗೆ ಪತ್ನಿ ರೇಖಾ ಮಂಜೇಶ್ವರ ಪೋಲೀಸರಿಗೆ ದೂರು ನೀಡಿದ್ದಾರೆ. ಸಂಬಂಧಿಕರು ಹಾಗೂ ಮೀನು ಕಾರ್ಮಿಕರು ಸಮುದ್ರ ತೀರ ಹಾಗೂ ವಿವಿಧ ಕಡೆ ಹುಡುಕಾಡಿದರೂ ಪತ್ತೆಯಾಗಲಿಲ್ಲ. ಈ ಬಗ್ಗೆ ಕೋಸ್ಟಲ್ ಪೋಲೀಸರಿಗೂ ಮಾಹಿತಿ ನೀಡಲಾಗಿದೆ. ಇವರ ನಾಪತ್ತೆಯಿಂದ ಮನೆಯವರಲ್ಲಿ ಆತಂಕ ಸೃಷ್ಟಿಯಾಗಿದೆ.


Share with

Leave a Reply

Your email address will not be published. Required fields are marked *