ಮಾಲಿನ್ಯ ಮುಕ್ತ ಪಂಚಾಯತ್ ಸಾರ್ವಜನಿಕ ರ ಸಹಕಾರ ಅಗತ್ಯ

Share with

ಮಂಜೇಶ್ವರ : ಜನರ ಮನಸ್ಥಿತಿ ಬದಲಾದರೆ ರಸ್ತೆ ಬದಿ, ಸಾರ್ವಜನಿಕ ಸ್ಥಳ ಗಳಲ್ಲಿ, ರಾತ್ರಿ ಮರವಿನಲ್ಲಿ ಕಿಡಿಗೇಡಿಗಳು ಮಾಡುವ ಅನಾಚಾರಕ್ಕೆ ಪಂಚಾಯತ್ ಬೆಲೆ ತೆರಬೇಕಾಗಿ ಬರುತ್ತದೆ ಎಂದು ಮಂಜೇಶ್ವರ ಪಂಚಾಯತ್ ಅಧ್ಯಕ್ಷೆ  ಜೀನ್ ಲವೀನೋ ಮೆಂತೆರೋ ಹೇಳಿದರು.
ಪಂಚಾಯತ್ ವ್ಯಾಪ್ತಿಯ ಹರಿತ ಕರ್ಮ ಸೇನೆ, ಕುಟುಂಬ ಶ್ರೀ,  ವ್ಯಾಪಾರಿ ಗಳ, ಜನಪ್ರತಿನಿದಿನಗಳ, ಆಶಾ ಕಾರ್ಯಕರ್ತರ ಕಾರ್ಯಾಗಾರ ಜಿಲ್ಲಾ ಸುಚಿತ್ವ ಮಿಷನ್ ಹಮ್ಮಿಕೊಂಡ  ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಸುಚಿತ್ವ ಮಿಷನ್ ಜಿಲ್ಲಾ ಮುಖ್ಯಸ್ಥ ಕೃಷ್ಣ ಕುಮಾರ್ ಮಾಹಿತಿ ನೀಡಿ.ಹರಿತ ರ‍್ಮ ಸೇನೆಯ ಕಾರ್ಯಗಳನ್ನು ಮೆಚ್ಚುಗೆ ವ್ಯಕ್ತಪಡಿಸಿದರು.
ಕೆಲವು ಕಠಿಣ ನರ‍್ಧಾರ ಗಳಿಂದ ಮಾತ್ರ ನಿಯಮ ಜಾರಿ ಮಾಡಿದರೆ ಯಶಸ್ಸು, ಪಂಚಾಯತ್ ಸೇವೆ ನೀಡಬೇಕಾದರೆ ಜನತೆಯ ಸಹಕಾರವು ಅಗತ್ಯ ಎಂದರು.
ತ್ಯಾಜ್ಯ ಎಸೆಯುವವರ ಮೇಲೆ ಕಠಿಣ ಕ್ರಮ ಅಗತ್ಯ, ಪ್ರತಿ ವ್ಯಾಪಾರ ಕೇಂದ್ರಗಳು ಪಂಚಾಯತ್  ಲೈಸನ್ಸ್ ಅಗತ್ಯವಾಗಿ ಪಡೆದಿರಬೇಕು ಮತ್ತು ಹರಿತ ಕರ್ಮ ಸೇನೆಗೆ  ಪ್ರೀ ನೀಡಬೇಕು.ಸರಕಾರ ನಿಷೇದಿಸಿದ ಪ್ಲಾಸ್ಟಿಕ್ ಬಳಕೆ ಮಾಡದಂತೆ ಕಠಿಣ ನಿಯಮ, ಬೀದಿ ಬದಿ ವ್ಯಾಪಾರಿಗಳ ಮೇಲೆ ನಿಗಾ, ಹೋಟೆಲ್, ಮಾಂಸ ಅಂಗಡಿ ಗಳ ಲೈಸನ್ಸ್ ಕಡ್ಡಾಯ ಕೂಡಲೇ ಜಾರಿ ಮಾಡಬೇಕು.ಅಗತ್ಯ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಅಳವಡಿಕೆ ಅಗತ್ಯ ಎಂದು ಹೇಳಿದರು. ಪಂಚಾಯತ್ ಕರ‍್ಯರ‍್ಶಿ ಸ್ವಾಗತಿಸಿ, ದರು.
ಸದಸ್ಯರಾದ ಮೊಹಮ್ಮದ್ ಸಿದ್ದಿಕ್, ರಾಧಾ ಕನಿಲ, ಆದರ್ಶ್ ಬಿ ಎಂ, ಸಮೀರಾ, ಕುಲ್ಸುಮ್ಮಾ, ಜಯಂತಿ, ಲಕ್ಷ್ಮಣ ಕುಚ್ಚಿಕಾಡ್, ವಿನಯ ಭಾಸ್ಕರ್, ಪಂಚಾಯತ್ ಅಧಿಕಾರಿಗಳು ಉಪಸ್ಥಿತರಿದ್ದರು. ಸುಪ್ರಿಯಾ  ಶೆಣೈ ವಂದಿಸಿದರು [   ಸಭೆಯಲ್ಲಿ


Share with

Leave a Reply

Your email address will not be published. Required fields are marked *