ಮಂಜೇಶ್ವರ ಶ್ರೀ ವೀರಭದ್ರ ಮಹಾಮ್ಮಾಯಿ ಕ್ಷೇತ್ರದ ಸಭಾಂಗಣದಲ್ಲಿ 1766ನೇ ಮದ್ಯವರ್ಜನ ಶಿಬಿರ ಉದ್ಘಾಟನೆ

Share with

ಮಂಜೇಶ್ವರ: ದುಡಿಮೆಯ ಬಹುಪಾಲು ಹಣವನ್ನು ಮದ್ಯಪಾನದಂತಹ ದುಶ್ಚಟಗಳಿಗೆ ವಿನಿಯೋಗಿಸಿ ಕುಟುಂಬಗಳು ಆರ್ಥಿಕ ಹಿನ್ನೆಡೆಯತ್ತ ಸಾಗುತ್ತಿವೆ. ಮದ್ಯಪಾನದ ಪಿಡುಗಿನಿಂದ ನಾಶವಾಗುತ್ತಿರುವ ಕುಟುಂಬಗಳನ್ನು ರಕ್ಷಿಸಿ ಆರ್ಥಿಕವಾಗಿ ಮುಂದೆ ತರಲು ಮದ್ಯವರ್ಜನ ಶಿಬಿರವನ್ನು ಮಂಜೇಶ್ವರದಲ್ಲಿ ದ್ವಿತೀಯ ಬಾರಿಗೆ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದು ಬ್ರಹ್ಮಶ್ರೀ ಬಡಾಜೆ ಬೂಡು ಗೋಪಾಲಕೃಷ್ಣ ತಂತ್ರಿಗಳು ನುಡಿದರು.

ಬ್ರಹ್ಮಶ್ರೀ ಬಡಾಜೆ ಬೂಡು ಗೋಪಾಲಕೃಷ್ಣ ತಂತ್ರಿಗಳು 1766ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿದರು.

ಅವರು ಡಿ.5ರಂದು ಹೊಸಂಗಡಿ ಬಳಿಯ ಬಂಗ್ರ ಮಂಜೇಶ್ವರ ಶ್ರೀ ವೀರಭದ್ರ ಮಹಾಮ್ಮಾಯೀ ದೇವಸ್ಥಾನದ ಸಭಾಂಗಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಿ.ಸಿ.ಟ್ರಸ್ಟ್ (ರಿ.) ಮಂಜೇಶ್ವರ ತಾಲೂಕು ಕಾಸರಗೋಡು ಜಿಲ್ಲೆ ಹಾಗೂ ಕಾಸರಗೋಡು ಜಿಲ್ಲಾ ಜನಜಾಗೃತಿ ವೇದಿಕೆ, ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಮಂಜೇಶ್ವರ ಮತ್ತು ವಿವಿಧ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ “1766ನೇ ಮದ್ಯವರ್ಜನ ಶಿಬಿರ”ವನ್ನು ದೀಪ ಬೆಳಗಿಸಿ ಉದ್ಘಾಟಿಸಿ, ಮಾತನಾಡಿದರು.

ಶ್ರೀ ಧಾಮ ಮಾಣಿಲದ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಆಶೀರ್ವಚನ ನೀಡಿದರು. ಸಮಾರಂಭದ ಅಧ್ಯಕ್ಷತೆಯನ್ನು ಕಾಸರಗೋಡು ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷರಾದ ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ ವಹಿಸಿದರು. ವೇದಿಕೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಿಬಿರಾಧಿಕಾರಿ ದೇವಿ ಪ್ರಸಾದ್, ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಜೀನ್ ಲವೀನಾ ಮೊಂತೇರೋ, ಉದ್ಯಾವರ ಮಾಡ ಶ್ರೀ ಅರಸು ಮಂಜೀಷ್ಣಾರ್ ದೈವಗಳ ಕ್ಷೇತ್ರದ ಅಣ್ಣ ದೈವದ ಪಾತ್ರಿಗಳಾದ ರಾಜ ಬೆಲ್ಚಪ್ಪಾಡ, ಜನಜಾಗೃತಿ ವೇದಿಕೆ ಕಾಸರಗೋಡಿನ ಸ್ಥಾಪಕಾಧ್ಯಕ್ಷರಾದ ಗೋಪಾಲ ಶೆಟ್ಟಿ ಅರಿಬೈಲ್, ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿಯ ಗೌರವಾಧ್ಯಕ್ಷರಾದ ಹರಿಶ್ಚಂದ್ರ ಶೆಟ್ಟಿಗಾರ್, ಕಾಸರಗೋಡು ಭಜನಾ ಪರಿಷತ್ತು ಅಧ್ಯಕ್ಷರಾದ ವೆಂಕಟರಮಣ ಹೊಳ್ಳ, ಚಿಗುರುಪಾದೆ ಶ್ರೀ ಮಹಾಲಿಂಗೇಶ್ವರ ಸೇವಾಸಮಿತಿಯ ಅಧ್ಯಕ್ಷರಾದ ಚಂದ್ರಹಾಸ ಶೆಟ್ಟಿ ಕುಳೂರು ಕನ್ಯಾನ, ಮಂಜೇಶ್ವರ ತಾಲೂಕು ಪ್ರಗತಿ ಬಂಧು ಸ್ವ ಸಹಾಯ ಸಂಘಗಳ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಉದಯಕುಮಾರ್ ಆನೆಬಾಗಿಲು, ಕಾಸರಗೋಡು ತಾಲೂಕಿನ ಕೇಂದ್ರ ಒಕ್ಕೂಟದ ಅಧ್ಯಕ್ಷರಾದ ಜ್ಞಾನೇಶ್ ಆಚರ‍್ಯ, ಮದ್ಯವರ್ಜನ ಶಿಬಿರದ ವ್ಯವಸ್ಥಾಪನಾ ಸಮಿತಿಯ ಎರಡನೇ ಬಾರಿಯ ಅಧ್ಯಕ್ಷರಾದ ಹರೀಶ್ ಶೆಟ್ಟಿ ಕಡಂಬಾರ್, ಜನ ಜಾಗೃತಿ ವೇದಿಕೆಯ ನಿಕಟಪರ‍್ವ ಅಧ್ಯಕ್ಷರಾದ ಅಶ್ವಥ್ ಪೂಜಾರಿ ಲಾಲ್ಭಾಗ್, ಜನಜಾಗೃತಿ ವೇದಿಕೆಯ ಸದಸ್ಯರಾದ ಹರೀಶ್ ಶೆಟ್ಟಿ ಮಾಡ, ಕರ‍್ಯಾಧ್ಯಕ್ಷ ಯಾದವ ಬಡಾಜೆ, ಶ್ರೀ ವೀರಭದ್ರ ಮಹಾಮ್ಮಾಯೀ ದೇವಸ್ಥಾನದ ದೈವದ ಪಾತ್ರಿಗಳಾದ ವಾಸುದೇವ ಶೆಟ್ಟಿಗಾರ್ ಕಡಂಬಾರು, ದೇವರಾಜ್, ವಸಂತ ಪೂಜಾರಿ ಉದ್ಯಾವರ, ಯೋಜನಾಧಿಕಾರಿ ಶ್ರೀಮತಿ ಶಶಿಕಲಾ ಸುರ‍್ಣ, ಹಿರಿಯರಾದ ಈಶ್ವರ ಮಾಸ್ಟರ್, ಕೋಶಾಧಿಕಾರಿ ರವಿ ಮುಡಿಮಾರ್, ಆರೋಗ್ಯ ಸಹಾಯಕಿ ನೇತ್ರ, ಮೊದಲಾದವರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ಮುಖೇಶ್ ಗಟ್ಟಿ ಸ್ವಾಗತಿಸಿ, ತಲಪಾಡಿ ವಲಯದ ಮೇಲ್ವಿಚಾರಕರಾದ ಭಾಸ್ಕರ್ ನಿರೂಪಿಸಿ, ಜಿಲ್ಲಾ ಜನ ಜಾಗೃತಿ ವೇದಿಕೆಯ ಸದಸ್ಯರಾದ ಹರೀಶ್ ಶೆಟ್ಟಿ ಮಾಡ ವಂದಿಸಿದರು. ಶಿಬಿರದಲ್ಲಿ ಒಟ್ಟು 70 ಮಂದಿ ಶಿಬಿರಾರ್ಥಿಗಳು ಭಾಗವಹಿಸುತ್ತಿದ್ದು, ಮಂಜೇಶ್ವರ ಹಾಗೂ ಕಾಸರಗೋಡು ತಾಲೂಕಿನ ಯೋಜನಾಧಿಕಾರಿಗಳು, ಜನಜಾಗೃತಿ ವೇದಿಕೆಯ ಸದಸ್ಯರು, ಮೇಲ್ವಿಚಾರಕ ಶ್ರೇಣಿಯ ಸಿಬ್ಬಂದಿಗಳು, ಒಕ್ಕೂಟದ ಎಲ್ಲಾ ಪದಾಧಿಕಾರಿಗಳು, ನವಜೀವನ ಸಮಿತಿ ಸದಸ್ಯರು, ಶೌರ್ಯ ಘಟಕದ ಪದಾಧಿಕಾರಿಗಳು, ಸದಸ್ಯರು, ಸೇವಾಪ್ರತಿನಿಧಿಗಳು, ಒಕ್ಕೂಟದ ಸದಸ್ಯರು ನೇತೃತ್ವ ನೀಡುತ್ತಿದ್ದಾರೆ.


Share with

Leave a Reply

Your email address will not be published. Required fields are marked *