ಮಂಜೇಶ್ವರ: ಮೂರು ವರ್ಷಗಳ ಹಿಂದೆ ಹೊಸಂಗಡಿಯ ರಾಜಧಾನಿ ಜುವೆಲರಿಯಿಂದ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಇನ್ನಿಬ್ಬರನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಕರ್ನಾಟಕ ಬಂಟ್ವಾಳ ಫರಂಗಿಪೇಟೆ ಪುದು ಗ್ರಾಮದ ಪಂಜಾಮೆ ಹೌಸ್‌ನ ನಿವಾಸಿಗಳಾದ ಮುಹಮ್ಮದ್ ಇಸ್ಮಾಯಿಲ್ (52) ಮತ್ತು ಮುಹಮ್ಮದ್ ಗೋಸ್ (41) ಬಂಧಿತರು.
2021 ಜುಲೈ 26ರಂದು ಹೊಸಂಗಡಿಯ ರಾಜಧಾನಿ ಜುವೆಲರಿಗೆ ಬಂದ ಏಳು ಮಂದಿಯ ತಂಡ ಭದ್ರತಾ ಸಿಬಂದಿಯ ಕೈಕಾಲು ಕಟ್ಟಿ ಬಾಯಿಗೆ ಬಟ್ಟೆ ತುರುಕಿ ಹಲ್ಲೆಗೈದು ಜುವೆಲರಿಯ ಹಿಂಭಾಗದಲ್ಲಿ ಕಟ್ಟಿ ಹಾಕಿ ಬಳಿಕ ಗ್ಯಾಸ್ ಕಟ್ಟರ್ ಬಳಸಿ ಜುವೆಲರಿಯ ಬೀಗ ಮುರಿದು 9 ಲಕ್ಷ ರೂ. ಸೊತ್ತುಗಳನ್ನು ದರೋಡೆ ಮಾಡಿತ್ತು. ಮಂಜೇಶ್ವರ
ಮೌಲ್ಯದ ಬೆಳ್ಳಿ ಆಭರಣ, 2.50 ಲಕ್ಷ ರೂ. ಮೌಲ್ಯದ ವಾಚ್, 4.50 ಲಕ್ಷ ರೂ. ನಗದು ಸಹಿತ ಒಟ್ಟು 16 ಲಕ್ಷ ರೂ. ಪೊಲೀಸರು ಕೇಸು ದಾಖಲಿಸಿ ಈ ಹಿಂದೆ ಮೂವರನ್ನು ಬಂಧಿಸಿದ್ದರು. ಇನ್ನುಳಿದ ಆರೋಪಿಗಳಿಗೆ ಶೋಧ ನಡೆಯುತ್ತಿದೆ.