ಮಂಜೇಶ್ವರ: ಕೂಲಿ ಕಾರ್ಮಿಕ ಕೆರೆಗೆ ಹಾರಿ ಆತ್ಮಹತ್ಯೆಗೈದ ಘಟನೆ ನಡೆದಿದೆ. ಮೂಲತ ಕರ್ನಾಟಕದ ಪಜೀರ್ ನಿವಾಸಿ ಕಡಂಬಾರು ಶ್ರೀ ವಿಷ್ಣುಮೂರ್ತಿ ಕ್ಷೇತ್ರ ಸಮೀಪವಿರುವ ಪತ್ನಿ ಮನೆಯಲ್ಲಿ ವಾಸವಾಗಿರುವ ಜಯಂತ (60) ಎಂಬವರು ಮೃತಪಟ್ಟ ವ್ಯಕ್ತಿ.
ನ. 27ರಂದು ಸಂಜೆ ಕಡಂಬಾರ್ ಪಜೀರ್ ಎಂಬಲ್ಲಿ ಖಾಸಗಿ ವ್ಯಕ್ತಿಯ ತೋಟದ ಕೆರೆಗೆ ಹಾರಿದ್ದಾರೆ ಈ ವಿಷಯ ಸ್ಥಳೀಯರ ಗಮನಕ್ಕೆ ಬಂದಿದ್ದು ಕೂಡಲೇ ಉಪ್ಪಳದಿಂದ ಅಗ್ನಿ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ ಕೂಡಲೇ ತಲುಪಿದ ಅಗ್ನಿಶಾಮಕದಳ ವ್ಯಕ್ತಿಯನ್ನು ಮೇಲೆ ಕೆತ್ತಿದ್ದಾರೆ ಈ ವೇಳೆ ಅವರು ಮೃತಪಟ್ಟಿದ್ದರು ಸ್ಥಳಕ್ಕೆ ಮಂಜೇಶ್ವರ ಪೊಲೀಸರು ಆಗಮಿಸಿ ಮಾಹಿತಿ ಸಂಗ್ರಹಿಸಿದ್ದಾರೆ.
ಮೃತರು ಪತ್ನಿ ಗಿರಿಜಾ, ಮಕ್ಕಳಾದ ಸುಜಾತ, ಸುಮಲತಾ, ಶಶಿಕಾಂತ್, ಸೊಸೆಯಂದಿರು, ಓರ್ವ ಸಹೋದರ ಜಯರಾಮ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮಂಜೇಶ್ವರ ಪೊಲೀಸರ ನೇತೃತ್ವದಲ್ಲಿ ಮಂಗಲ್ಪಾಡಿ ತಾಲೂಕು ಆಸ್ಪತ್ರೆಯಲ್ಲಿ ಮೃತ ದೇಹದ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಬಿಟ್ಟುಕೊಡಲಾಗಿದೆ.