ಮಂಜೇಶ್ವರ: ಕಾರು ಢಿಕ್ಕಿ ಹೊಡೆದು ಮೂಲತಃ ಮೀಯಪದವು ಕುಳಿಬೈಲು ನಿವಾಸಿ, ಪ್ರಸ್ತುತ ಮಂಜೇಶ್ವರ ಕೆದುಂಬಾಡಿಯ ಬಾಡಿಗೆ ಮನೆಯಲ್ಲಿ ವಾಸವಿದ್ದ ಕೂಲಿ ಕಾರ್ಮಿಕ ಜಯಂತ (48) ಸಾವಿಗೀಡಾಗಿದ್ದಾರೆ. ಅವರು ಮಾ.20ರಂದು ಮಂಜೇಶ್ವರ ರಾಗಂ ಜಂಕ್ಷನ್‌ನಲ್ಲಿ ರಸ್ತೆ ದಾಟುತ್ತಿದ್ದಾಗ ಕಾರು ಢಿಕ್ಕಿ ಹೊಡೆದು ಗಂಭೀರ ಗಾಯಗೊಂಡಿದ್ದರು. ಅವರನ್ನು ಮಂಗಳೂರಿನ ಆಸ್ಪತ್ರೆಗೆ ಸಾಗಿಸಿದರೂ ರಕ್ಷಿಸಲು ಸಾಧ್ಯವಾಗಲಿಲ್ಲ.






