ಮಂಜೇಶ್ವರ : ಮಂಜೇಶ್ವರ ಶಾಸಕ ಎ ಕೆ ಎಂ ಅಶ್ರಫ್ ರವರ ಶಾಸಕ ನಿಧಿ ವಿನಿಯೋಗಿಸಿ ವರ್ಕಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಗಳಲ್ಲಿ ನಿರ್ವಹಣೆ ಮಾಡಲಾದ ಮೂರು ರಸ್ತೆಗಳಲ್ಲಿ ಐದು ಲಕ್ಷ ರೂ. ವೆಚ್ಚದ ಕೊಡ್ಲಮೊಗರು ದೇವಸ ರಸ್ತೆ, ಹದಿನೈದು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ಬಜಲಕರಿಯ ಪೊಯ್ಯ ರಸ್ತೆ ಹಾಗೂ ಐದು ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಾದ ತೌಡುಗೋಳಿ ಆಲಭೆ ರಸ್ತೆ ಗಳನ್ನು ಶಾಸಕ ಎ ಕೆ ಎಂ ಅಶ್ರಫ್ ಲೋಕಾರ್ಪಣೆ ಗೊಳಿಸಿದರು.
ಈ ಯೋಜನೆಗಳು ಕ್ಷೇತ್ರದ ನಿವಾಸಿಗಳಿಗೆ ಸುಗಮ ಪ್ರಯಾಣವನ್ನು ಒದಗಿಸುವ ಉದ್ದೇಶವನ್ನು ಹೊಂದಿದ್ದು, ಸ್ಥಳೀಯ ಅಭಿವೃದ್ಧಿಯ ದಿಕ್ಕಿನಲ್ಲಿ ಮಹತ್ವದ ಹೆಜ್ಜೆಯನ್ನು ಎತ್ತಿ ತೋರಿಸಿದೆ.
ಮುಂಬರುವ ವರ್ಷಗಳಲ್ಲಿ ಕ್ಷೇತ್ರದಾದ್ಯಂತ ಜನರಿಗೆ ಅನುಕೂಲಕರವಾಗುವ ರೀತಿಯಲ್ಲಿ ಇನ್ನಷ್ಟು ರಸ್ತೆಗಳನ್ನು ಅಭಿವೃದ್ಧಿಗೊಳಿಸಲು ಮುಂಗಡ ನೀಡುವುದಾಗಿಯೂ ಮಂಜೇಶ್ವರ ಕ್ಷೇತ್ರದಲ್ಲಿ ಉದ್ಯೋಗಸ್ಥರ ಅಭಾವವು ಇನ್ನಿತರ ಯೋಜನೆಗಳ ನಿರ್ವಹಣೆಗೆ ತೊಡಗಿರುವುದಾಗಿಯೂ ಮುಂದಿನ ತಿಂಗಳಲ್ಲಿ ನಡೆಯುವ ವಿಧಾನ ಸಭಾ ಅಧಿವೇಶನದಲ್ಲಿ ಈ ಬಗ್ಗೆ ಧ್ವನಿ ಎತ್ತುವುದಾಗಿಯೂ ಈ ಸಂದರ್ಭದಲ್ಲಿ ಶಾಸಕರು ಭರವಸೆಯ ಮಾತುಗಳನ್ನು ಹೇಳಿದರು.
ಗ್ರಾಮ ಪಂಚಾಯತ್ ಅಧ್ಯಕ್ಷೆ ಭಾರತಿ ಅಧ್ಯಕ್ಷತೆ ವಹಿಸಿದರು.
ಪಂಚಾಯತ್ ಸ್ಥಾಯಿ ಸಮಿತಿ ಅಧ್ಯಕ್ಷೆ ಮಮತಾ ಶೇಖರ್, ಪಂಚಾಯತ್ ಸದಸ್ಯರುಗಳಾದ ಅಬ್ದುಲ್ ಮಜೀದ್ ಬಿ ಎ, ಉಮ್ಮರ್, ಪದ್ಮಾವತಿ, ಮಾಜಿಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಿ ಬಿ ಅಬೂಬಕ್ಕರ್ ಪಾತೂರು, ಮಾಜಿ ಸದಸ್ಯರಾದ ಮುಹಮ್ಮದ್ ಮಜಾಲ್, ನಿಕೋಲಸ್ ಮೊಂತೆರೋ ,ಹಾಗೂ ಹಸೈನಾರ್ ದೇವಸ, ಮುಹಮ್ಮದ್ ದೇವಸ, ಅಬ್ದುಲ್ ಕರೀಂ ಮಾಸ್ಟರ್, ಸಿದ್ದೀಕ್ ಕೊಡ್ಲಮೊಗರು, ರೋನಿ ಡಿಸೋಜ, ಗೋಡ್ವಿನ್, ಬಾಸ್ಕರ್ ಪೊಯ್ಯ, ಫೆಲಿಕ್ಸ್ ಡಿಸೋಜ, ಮುಹಮ್ಮದ್ ಬಟ್ಯಡ್ಕ, ಲತೀಫ್ ತೋಕೆ, ಕುಂಞಿ ಟಿ ಎಂ, ಮೊಯ್ದಿನ್ ಕುಂಞಿ ತೋಕೆ ಮೊದಲಾದವರು ಭಾಗವಹಿಸಿದರು.
ಈ ಸಂದರ್ಭ ಗ್ರಾಮಸ್ಥರು ಶಾಸಕರನ್ನು ಶಾಲು ಹೊದಿಸಿ ಸನ್ಮಾನಿಸಿದರು.