ಮಂಗಲ್ಪಾಡಿ:ಮಂಜೇಶ್ವರ ನಗರ, ಚೆರುಗೋಳಿ ಇಲ್ಲಿನ ಶ್ರೀ ಚೀರುಂಭಾ ಭಗವತೀ ಕ್ಷೇತ್ರ ನಡಾವಳಿ ಮಹೋತ್ಸವ ಎಪ್ರಿಲ್ 11ಮತ್ತು 12ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.

ಎ. 10ರಂದು ಸಂಜೆ 4ಕ್ಕೆ ಶ್ರೀಕೃಷ್ಣ ಭಜನಾ ಮಂದಿರ ಕೃಷ್ಣನಗರ ಪರಿಸರದಿಂದ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ.
11ರಂದು ಬೆಳಿಗ್ಗೆ 7ಕ್ಕೆ ತಂತ್ರಿವರೇಣ್ಯ ಬ್ರಹ್ಮಶ್ರೀ ಬಂಬ್ರಾಣ ಶಂಕರನಾರಾಯಣ ಕಡಮಣ್ಣಾಯರಿಗೆ ಪೂರ್ಣಕುಂಭ ಸ್ವಾಗತ, 7.30ಕ್ಕೆ ಗಣಪತಿ ಹೋಮ, 8.30ರಿಂದ ಚಂಡಿಕಾ ಹೋಮ ಪ್ರಾರಂಭ, 11.30ಕ್ಕೆ ಹೋಮ ಪೂರ್ಣಾಹುತಿ, ಅಷ್ಟಾವಧಾನ ಸೇವೆ, ಮಧ್ಯಾಹ್ನ 1ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ
ಸಂಜೆ 3ಕ್ಕೆ ಬಟ್ಯ ಮೂತೆ ಚೆಟ್ಟಿಯಾರ್ ರವರಿಂದ ದೀಪ ಪ್ರಜ್ವಲನೆಯೊಂದಿಗೆ ಸಾಂಸ್ಕಂತಿಕ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಲಿದ್ದಾರೆ. 3.30ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಕೊಂಡೆವೂರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಆಶೀರ್ವಚನ ನೀಡಲಿದ್ದಾರೆ.
ಕಾರ್ಯಕ್ರಮದಲ್ಲಿ ನಿವೃತ್ತ ಐ.ಎ,ಎಸ್ ಅಧಿಕಾರಿ ಕೆ.ಶಶಿಧರ ರವರು ಅಧ್ಯಕ್ಷತೆ ವಹಿಸುವರು. ರಾಜ್ಯ ಸಭಾ ಸದಸ್ಯ ಡಾ.ಕೆ ನಾರಾಯಣ ಬೆಂಗಳೂರು, ಉದ್ಯಮಿಗಳಾದ ಸದಾಶಿವ ಶೆಟ್ಟಿ ಕುಳೂರು, ಕನ್ಯಾನ, ಡಾ.ಮೋಹನದಾಸ್.ಕೆ ಬೆಂಗಳೂರು, ಡಾ.ಮಂಜುನಾಥ ಶೆಟ್ಟಿ ಭಾಗವಹಿಸಲಿದ್ದಾರೆ. ರಾತ್ರಿ 7.30ಕ್ಕೆ ಭಂಡಾರ ಮೆರವಣಿಗೆ, 9ಕ್ಕೆ ನೃತ್ಯ ಬಲಿ ಉತ್ಸವ, ಅನ್ನಸಂತರ್ಪಣೆ, 10ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕುಳಿಚ್ಚಾಟಂ, 12ರಂದು ಪ್ರಾತಕಾಲ 5.30ಕ್ಕೆ ಬಲಿ ಉತ್ಸವ, ಬೆಳಿಗ್ಗೆ 9.30ಕ್ಕೆ ಶ್ರೀ ವಿಷ್ಣುಮೂರ್ತಿ ದೈವದ ಕೋಲ, 10.30ಕ್ಕೆ ಎಡಜಾಚಾರ, ಚಪ್ಪರ ಮದುವೆ, ತುಲಾಭಾರ ಸೇವೆಗಳು, 11.30ಕ್ಕೆ ನೃತ್ಯಬಲಿ ಉತ್ಸವ, ಮಧ್ಯಾಹ್ನ 1ಕ್ಕೆ ಮಹಾಪೂಜೆ, ಅನ್ನಸಂತರ್ಪಣೆ, 2.30ಕ್ಕೆ ಶ್ರೀ ಮಲರಾಯಿ ಮತ್ತು ಬಂಟ ದೈವಗಳ ನೇಮೋತ್ಸವ, ಸಂಜೆ 5ಕ್ಕೆ ಶ್ರೀ ಗುಳಿಗನ ಕೋಲ, ರಾತ್ರಿ ಅನ್ನಸಂತರ್ಪಣೆ ನಡೆಯಲಿದೆ.




