ಮಂಜೇಶ್ವರ ಪಂಚಾಯತ್ ಅರೋಗ್ಯ ಇಲಾಖೆ ಸಭೆ.

Share with


ಮಂಜೇಶ್ವರ : ಸಾಂಕ್ರಾಮಿಕ ರೋಗ ತಡೆಗಟ್ಟುವಿಕೆ, ಮುಂಜಾಗ್ರತ ಕ್ರಮಆಶಾ ಕಾರ್ಯಕರ್ತರ ಅವಲೋಕನ ಸಭೆ ಮಂಜೇಶ್ವರ ಸರಕಾರಿ ಆಸ್ಪತ್ರೆ ಯಲ್ಲಿ ಜರಗಿತು.
ಪಂಚಾಯತ್ ಅಧ್ಯಕ್ಷೆ ಜೀನ್ ಲವೀನಾ ಮೆಂತೆರೋ ಅಧ್ಯಕ್ಷತೆ ವಹಿಸಿದ್ದರು.ಮೆಡಿಕಲ್ ಆಫೀಸರ್ ಡಾ ಪ್ರಭಾಕರ್ ಶೆಟ್ಟಿ ರೋಗಗಳ ಬಗ್ಗೆ ಮಾಹಿತಿ ನೀಡಿದರು, ತೆಗೆಯಬೇಕಾದ ಮುಂಜಾಗ್ರತೆ ಗಳ ಬಗ್ಗೆ ಅವಲೋಕಿಸಿದರು.
ಆಶಾ ಕಾರ್ಯಕರ್ತರ ಕರ್ತವ್ಯ ವನ್ನು ಅಭಿನಂದಿಸಲಾಯಿತು.
ಮಂಜೇಶ್ವರ ಅರೋಗ್ಯ ಇಲಾಖೆ ಮತ್ತು ಪಂಚಾಯತ್ ಜಂಟಿ ಯಾಗಿ ಸಾಂಕ್ರಾಮಿಕ ರೋಗ ತಡೆವಿಕೆಗೆ ಮತ್ತು ಮಾಹಿತಿ ನೀಡಲು ತೀರ್ಮಾನಿಸಯಿತು.
ರಸ್ತೆ ಬದಿಗಳಲ್ಲಿ, ಸಾರ್ವಜನಿಕ ಸ್ಥಳಗಲ್ಲಿ ತ್ಯಾಜ್ಯ ಎಸೆಯುವವರ ವಿರುದ್ಧ ಕಠಿಣ ಕ್ರಮಕ್ಕೆ ತೀರ್ಮಾನಿಸಯಿತು.
ಅರೋಗ್ಯ ದ್ರಷ್ಠಿಯಿಂದ ಆಹಾರ ಸೇವನ ಕೇಂದ್ರಗಲ್ಲಿ, ಹೋಟೆಲ್, ತಟ್ಟುಕಡಾ, ಮದುವೆ ಸಭಾಂಗಣ ಗಲ್ಲಿ ಅರೋಗ್ಯ ಇಲಾಖೆ, ಹರಿತ ಕರ್ಮಸೇನೆ, ಆಶಾ ವರ್ಕರ್, ಪಂಚಾಯತ್ ನೇತೃತ್ವದಲ್ಲಿ ಪರಿಶೋಧನೆ, ದಾಳಿ ನಡೆಸಲು ತೀರ್ಮಾನ, ತ್ಯಾಜ್ಯ ಎಸೆಯುವುದು ಕಂಡರೆ ಅಂತವ ರ ಮಾಹಿತಿ ನೀಡಲು ಸಾರ್ವಜನಿಕರು ಮುಂದೆ ಬರಲು ಸಾರ್ವಜನಿಕರಲ್ಲಿ ವಿನಂತೀದೆ.
ಪಂಚಾಯತ್ ಉಪಾಧ್ಯಕ್ಷ, ಮೊಹಮ್ಮದ್ ಸಿದ್ದಿಕ್, ಸ್ಥಾಯಿ ಸಮಿತಿ ಅಧ್ಯಕ್ಷ ಯಾದವ ಬಡಾಜೆ, ಸದಸ್ಯರಾದ ಆದರ್ಶ ಬಿ ಎಂ, ರೇಖಾ ಕೀರ್ತಿಶ್ವರ, ಲಕ್ಶ್ಮಣ ಬಿ ಎಂ,, ಅರೋಗ್ಯ ಇಲಾಖೆ ಯ
ಅಖಿಲ್, ಜ್ಯೋತಿ, ಸಪ್ನಾ ಸಿಸ್ಟರ್ ಉಪಸ್ಥಿತರಿದ್ದರು


Share with

Leave a Reply

Your email address will not be published. Required fields are marked *