ಮಂಜೇಶ್ವರ: ಹೆದ್ದಾರಿ ಅಭಿವೃದ್ದಿ ಹಿನ್ನೆಲೆಯಲ್ಲಿ ಹೊಸಂಗಡಿಯಲ್ಲಿ ನೂತನ ರಸ್ತೆಯಲ್ಲಿ ವಾಹನ ಸಂಚಾರ ಆರಂಭಗೊಂಡಿರುವುದರಿಂದ ಪೇಟೇಯಲ್ಲಿ ನಿತ್ಯ ಉಂಟಾಗುತ್ತಿರುವ ವಾಹನ ದಟ್ಟಣೆ ಕಡಿಮೆಗೊಂಡಿರುವುದು ಜನರು ನಿಟ್ಟುಸಿರು ಬಿಡುವಂತಾಗಿದೆ.
ಹೊಸಂಗಡಿ ಪೇಟೆಯಲ್ಲಿ ಸುಮಾರು ಒಂದು ಕಿಲೋ ಮೀಟರ್ ಉದ್ದಕ್ಕೆ ಕೆಳಭಾಗದಿಂದ ರಸ್ತೆಯನ್ನು ನಿರ್ಮಿಸಲಾಗಿದ್ದು, ಮಂಗಳೂರು ಭಾಗದಿಂದ ಕಾಸರಗೋಡು ಕಡೆಗಳಿಗೆ ವಾಹನಗಳು ಈ ರಸ್ತೆಯಲ್ಲಿ ಸಂಚಾರ ನಡೆಸುತ್ತಿದೆ. ಇದೀಗ ಮೇಲ್ಭಾಗದ ರಸ್ತೆಯಲ್ಲಿ ವಾಹನಗಳ ಸಂಖ್ಯೆ ಕಡಿಮೆಗೊಂಡಿರುವುದು ಬಸ್‌ಗಳ ಸಂಚಾರ ಸುಗಮಗೊಂಡಿದೆ.
ಎರಡು ಸರ್ವೀಸ್ ರಸ್ತೆ ಕಾಮಗಾರಿ ಭರದಿಂದ ಸಾಗುತ್ತಿದೆ. ಶೀಘ್ರದಲ್ಲೇ ಪೂರ್ತಿಗೊಳಿಸಿದ ಬಳಿಕ ಮಧ್ಯ ಭಾಗದ ಹೆದ್ದಾರಿ ರಸ್ತೆ ಕಾಮಗಾರಿ ಆರಂಭಗೊಳ್ಳಲಿದೆ. ಈಗಾಗಲೇ ತಲಪಾಡಿಯಿಂದ ಪೊಸೋಟು ತನಕ ಸರ್ವೀಸ್ ಹಾಗೂ ಹೆದ್ದಾರಿ ರಸ್ತೆಗಳು ಪೂರ್ತಿಗೊಂಡಿದೆ.