ಮಂಜೇಶ್ವರ: ಕೊಡ್ಲಮೊಗರು ನಡಿಮಾರ್ ನಿವಾಸಿ ಬಿಜೆಪಿ ಹಿರಿಯ ಕಾರ್ಯಕರ್ತ ಕೃಷಿಕ ರಾಧಾಕೃಷ್ಣ [63] ಹೃದಯಘಾತದಿಂದ ನ.19ರಂದು ಸಂಜೆ ನಿಧನರಾದರು. ಇವರು ಬಿಜೆಪಿಯ ವರ್ಕಾಡಿ ಪಂಚಾಯತ್‌ನ ಕೊಣಿಬೈಲ್ ಬೂತ್ ಮಾಜಿ ಅಧ್ಯಕ್ಷರಾಗಿದ್ದರು.
ಮೃತರು ಪತ್ನಿ ವಸಂತಿ, ಮಕ್ಕಳಾದ ಚೈತ್ರಾ, ಚರಣ್‌ರಾಜ್, ಚೇತನ್, ಚಿಂತನ್, ಇಬ್ಬರು ಸಹೋದರರು, ಮೂರು ಮಂದಿ ಸಹೋದರಿಯರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಮನೆಗೆ ಯುವಮೋರ್ಚಾ ರಾಜ್ಯಾಧ್ಯಕ್ಷ ಪ್ರಪುಲ್‌ಕೃಷ್ಣ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ, ಮಂಡಲಾಧ್ಯಕ್ಷ ಆದರ್ಶ್.ಬಿ.ಎಂ, ನೇತಾರರಾದ ದೂಮಪ್ಪ ಶೆಟ್ಟಿ ತಾಮಾರು, ಭಾಸ್ಕರ ಪೊಯ್ಯೆ, ಅಶ್ವಿನಿ ಪಜ್ವ, ರಾಜ್‌ಕುಮಾರ್ ಮೊದಲಾದವರು ಭೇಟಿ ನೀಡಿ ಸಂತಾಪ ಸೂಚಿಸಿದ್ದಾರೆ.