ಧರ್ಮತ್ತಡ್ಕದಲ್ಲಿ ಅದ್ದೂರಿಯಾಗಿ ಆರಂಭಗೊಂಡ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ

Share with

ಧರ್ಮತ್ತಡ್ಕ: ಧರ್ಮತ್ತಡ್ಕದ ಶ್ರೀ ದುರ್ಗಾಪರಮೇಶ್ವರಿ ವಿದ್ಯಾಸಂಸ್ಥೆಯಲ್ಲಿ ನವಂಬರ್ 7 ರಿಂದ 10 ರ ತನಕ 62 ನೇ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವವು ಅದ್ದೂರಿಯಾಗಿ ನಡೆಯಲಿರುವುದು.

ಈ ಪ್ರಯುಕ್ತ ಮಂಗಳವಾರ ಬೆಳಿಗ್ಗೆಯಿಂದ ರಚನಾ ಸ್ಪರ್ಧೆಗಳು ಆರಂಭಗೊಂಡಿವೆ. ಕಾರ್ಯಕ್ರಮದ ಔಪಚಾರಿಕ ಉದ್ಘಾಟನೆಯು ನ.8 ರಂದು ನಡೆಯಲಿದ್ದು, ಸ್ವಾಗತ ಗೀತೆಯೊಂದಿಗೆ ಆರಂಭಗೊಳ್ಳುವ ಈ ಕಾರ್ಯಕ್ರಮದಲ್ಲಿ ಅತಿಥಿಗಳನ್ನು ಸಾಂಪ್ರದಾಯಿಕ ಮೆರವಣಿಗೆಗಳೊಂದಿಗೆ ವೇದಿಕೆಗೆ ಕರೆದುಕೊಂಡು ಬರಲಾಗುವುದು.

ಕಾರ್ಯಕ್ರಮದ ಧ್ವಜಾರೋಹಣವನ್ನು ವಿದ್ಯಾಸಂಸ್ಥೆಗಳ ಕರೆಸ್ಪಾಂಡೆಂಟ್ ಶ್ರೀಮತಿ ಶಾರದಾ ಅಮ್ಮ ಅವರು ನೆರವೇರಿಸುವರು. ಮಂಜೇಶ್ವರ ಶಾಸಕರಾದ ಶ್ರೀ ಎ.ಕೆ.ಎಂ ಅಶ್ರಫ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಕಾಸರಗೋಡು ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಬೇಬಿ ಬಾಲಕೃಷ್ಣನ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಮಂಜೇಶ್ವರ ಉಪ ವಿದ್ಯಾಧಿಕಾರಿ ಶ್ರೀ ಜಿತೇಂದ್ರ ಎಸ್.ಎಚ್ ಅವರು ಪ್ರಾಸ್ತಾವಿಕ ಮಾತುಗಳನ್ನಾಡುವರು‌. ಪುತ್ತಿಗೆ ಪಂಚಾಯತ್ ಅಧ್ಯಕ್ಷ ಶ್ರೀ ಸುಬ್ಬಣ್ಣ ಆಳ್ವ, ಜಿಲ್ಲಾ ಪಂಚಾಯತ್ ಸದಸ್ಯ ನಾರಾಯಣ ನಾಯ್ಕ್, ಕಾಸರಗೋಡು ಡಿ.ಡಿ.ಇ ಶ್ರೀ ನಂದಿಕೇಶನ್ ಎನ್, ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅಧ್ಯಕ್ಷ ಶ್ರೀ ಅಬ್ದುಲ್ ಮಜೀದ್ ಎಂ.ಎಚ್, ಮಂಜೇಶ್ವರ ಬ್ಲೋಕ್ ಪಂಚಾಯತ್ ಸದಸ್ಯೆ ಶ್ರೀಮತಿ ಚಂದ್ರಾವತಿ ಎಂ, ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀಮತಿ ಶಾಂತಿ ವೈ, ಶ್ರೀ ಗಂಗಾಧರ, ಶ್ರೀ ಆಸಿಫ್ ಅಲಿ ಸಿ.ಎಂ, ಶ್ರೀಮತಿ ಜಯಂತಿ, ಶ್ರೀಮತಿ ಕಾವ್ಯಶ್ರೀ ಪಿ‌.ಕೆ, ಶ್ರೀಮತಿ ಇರ್ಶಾನ ಎಸ್, ಶ್ರೀಮತಿ ಪುಷ್ಪಲಕ್ಷ್ಮಿ ಎನ್, ಡಯಟ್ ಪ್ರಾಂಶುಪಾಲ ಶ್ರೀ ರಘುರಾಮ ಭಟ್ ಕೆ, ಪಿ.ಟಿ.ಎ ಅಧ್ಯಕ್ಷ ಶ್ರೀ ಶಿವಪ್ರಸಾದ್ ಶೆಟ್ಟಿ, ಎಂ.ಪಿ.ಟಿ.ಎ ಅಧ್ಯಕ್ಷೆ ಶ್ರೀಮತಿ ಪುಷ್ಪಾ ಕಮಲಾಕ್ಷ, ವ್ಯವಸ್ಥಾಪಕ ಶ್ರೀ ಶಂಕರನಾರಾಯಣ ಭಟ್ ಅವರು ಶುಭಾಶಯಗಳನ್ನು ತಿಳಿಸುವರು. ಪ್ರಾಂಶುಪಾಲ ಶ್ರೀ ರಾಮಚಂದ್ರ ಭಟ್ ಅವರು ಸ್ವಾಗತಿಸಿ, ಮುಖ್ಯೋಪಾಧ್ಯಾಯ ಶ್ರೀ ಗೋವಿಂದ ಭಟ್ ಅವರು ವಂದಿಸುವರು.

120 ಕ್ಕೂ ಹೆಚ್ಚಿನ ಶಾಲೆಗಳಿಂದ ಸುಮಾರು 4000 ಕ್ಕೂ ಅಧಿಕ ಪ್ರತಿಭೆಗಳು ಭಾಗವಹಿಸಿ ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸುವ ಈ ಮಹಾ ಉತ್ಸವವನ್ನು ಯಶಸ್ವಿಗೊಳಿಸುವಲ್ಲಿ ಎಲ್ಲಾ ವಿದ್ಯಾಭಿಮಾನಿಗಳು, ರಕ್ಷಕರು ಸರ್ವ ಸಹಕಾರವನ್ನು ನೀಡಬೇಕೆಂದು ಸಂಘಟನಾ ಸಮಿತಿಯವರು ಮನವಿಯನ್ನು ಮಾಡಿದ್ದಾರೆ.


Share with

Leave a Reply

Your email address will not be published. Required fields are marked *