ಮಂಜೇಶ್ವರ: ಲೋಕಸಭಾ ಚುನಾವಣೆಯಲ್ಲಿ ಕಾಸರಗೋಡು ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಯುಡಿಎಫ್ ಅಭ್ಯರ್ಥಿ ರಾಜ್ ಮೋಹನ್ ಉಣ್ಣಿತ್ತಾನ್ ರ ಚುನಾವಣಾ ವಿಜಯಕ್ಕಾಗಿ ವರ್ಕಾಡಿ ಪಂಚಾಯತ್ ಯುಡಿಎಫ್ ಚುನಾವಣಾ ಕನ್ವೆನ್ಶನ್ ನಡೆಯಿತು.
ಗಾಂಧಿನಗರ ಎ.ಎಚ್.ಪ್ಯಾಲೇಸ್ ನಲ್ಲಿ ನಡೆದ ಕನ್ವೆನ್ಶನ್ ಯುಡಿಎಫ್ ಮಂಜೇಶ್ವರ ಮಂಡಲ ಚೆಯರ್ ಮ್ಯಾನ್ ಅಬ್ದುಲ್ ಅಜೀಜ್ ಮರಿಕೆ ಉದ್ಘಾಟಿಸಿದರು. ದೇಶದ ಆಡಳಿತವನ್ನು ಪ್ರತಿಗಾಮಿ, ಕೋಮುವಾದಿ ಶಕ್ತಿಗಳು ಕೈಗೆತ್ತಿಕೊಳ್ಳದಂತೆ ಜಾಗರೂಕತೆ ವಹಿಸುವ ಜವಾಬ್ದಾರಿ ಮತದಾರರಿಗಿದೆ.
ಸಂವಿಧಾನ, ಸಾಂವಿಧಾನಿಕ ಸಂಸ್ಥೆ ಇತ್ಯಾದಿಗಳು ಅಪಾಯದಲ್ಲಿವೆ. ಸಕಲವನ್ನೂ ತನ್ನ ಅಧಿಕಾರ ಉಳಿಸುವ ಸಾಧನವನ್ನಾಗಿ ಪರಿಗಣಿಸಿರುವ ಮೋದಿ ಸರಕಾರಕ್ಕೆದುರಾಗಿ ಜನರಲ್ಲಿ ಇನ್ನಿಲ್ಲದ ಅತೃಪ್ತಿಯಿದ್ದು, ಅದು ಚುನಾವಣೆಯಲ್ಲಿ ಪ್ರತಿಫಲಿಸಲಿದೆ ಎಂದು ಶಾಸಕ ಎಕೆಎಂ ಅಶ್ರಫ್ ಹೇಳಿದರು.
ಯುಡಿಎಫ್ ಚೆಯರ್ ಮ್ಯಾನ್ ಮುಹಮ್ಮದ್ ಮಜಾಲ್ ಅಧ್ಯಕ್ಷತೆ ವಹಿಸಿದ್ದರು. ಸಭೆಯಲ್ಲಿ ಮಂಜೇಶ್ವರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಮುಹಮ್ಮದ್ ಡಿಎಂಕೆ, ನೇತಾರರಾದ ಶ್ರೀಅಬ್ದುಲ್ ಮಜೀದ್, ಉಮ್ಮರ್ ಬೋರ್ಕಳ, ಇಬ್ರಾಹಿಂ ಧರ್ಮನಗರ, ಕಮಲಾಕ್ಷಿ, ಸೀತಾ ಮುಂತಾದವರು ಉಪಸ್ಥಿತರಿದ್ದರು. ಪಿ.ಬಿ.ಅಬೂಬಕ್ಕರ್ ಪಾತೂರು ಚೆಯರ್ ಮ್ಯಾನ್, ಕೆ.ಮುಹಮ್ಮದ್ ವರ್ಕಿಂಗ್ ಚೆಯರ್ ಮ್ಯಾನ್, ಮುಹಮ್ಮದ್ ಮಜಾಲ್ ಕನ್ವೀನರ್ ಆಗಿ ಆಯ್ಕೆಯಾದರು.