ಮಂಜೇಶ್ವರ: ಮೋದಿ ಈ ದೇಶದ ಸಂಪತ್ತು, ಮೋದಿ ಮತ್ತೆ ಪ್ರಧಾನಿ ಆಗಬೇಕಾದದ್ದು ಈ ದೇಶದ ಅವಶ್ಯಕ, 100 ಶೇಕಡಾ ಮತದಾನ ಪ್ರಬುದ್ಧ ಪ್ರಜಾಪ್ರಭುತ್ವದ ಸಂಕೇತ, ಕಾಸರಗೋಡು ಜಿಲ್ಲೆಯಲ್ಲಿಯೂ ದೇಶದ ಪ್ರಧಾನಿ ಗೆ ಬೆಂಬಲವಾಗಿ ಬಿಜೆಪಿ ಗೆಲುವು ಅವಶ್ಯಕ ಎಂದು ವಿಶ್ವಹಿಂದೂ ಪರಿಷತ್ ಜಿಲ್ಲಾ ಸಮಿತಿ ಅಭಿಪ್ರಾಯ ಪಟ್ಟಿದೆ. ಕಾರ್ಯಕರ್ತರು ಬಿಜೆಪಿ ಗೆಲುವಿಗೆ ಶ್ರಮಿಸಬೇಕು, ಅಭಿಪ್ರಾಯ ವ್ಯತ್ಯಾಸ ಗಳಿದ್ದರೆ ಚುನಾವಣೆ ಅದಕ್ಕೆ ಸಮಯವಲ್ಲ.
ಮೋದಿ ಬೆಂಬಲವಾಗಿ ಬಿಜೆಪಿ ಅಭ್ಯರ್ಥಿಗಳ ಗೆಲುವು ಅಗತ್ಯ ಎಂದು ತಿಳಿಸಿದೆ. ಹೊಸಂಗಡಿ ಪ್ರೇರಣಾದಲ್ಲಿ ಮಾ.31ರಂದು ಜರಗಿದ ವಿಶ್ವಹಿಂದೂ ಪರಿಷತ್ ಜಿಲ್ಲಾ ಸಭೆಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. ಜಯದೇವ ಖಂಡಿಗೆ ಅಧ್ಯಕ್ಷತೆ ವಹಿಸಿದ್ದರು, ಸೇವಾ ಪ್ರಮುಖ್ ಸುರೇಶ ಶೆಟ್ಟಿ ಪರoಕಿಲ, ಸಂಕಪ್ಪ ಭಂಡಾರಿ, ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಕೃಷ್ಣಶಿವಕೃಪಾ ಕುಂಜತ್ತೂರು, ಮೀರಾ ಆಳ್ವ ಟೀಚರ್, ಯಾದವ ಕೀರ್ತೇಶ್ವರ, ಹರಿಣಾಕ್ಷಿ ಕುಂಬಳೆ, ವಾಮನ ಆಚರ‍್ಯ, ಉಳುವಾನ ಶಂಕರ ನಾರಾಯಣ ಭಟ್ ಮೊದಲಾದವರು ಉಪಸ್ಥಿತರಿದ್ದರು.