ಮಂಜೇಶ್ವರ: ಬಟ್ಟೆಗೆ ಬೆಂಕಿ ತಗಲಿ ಸುಟ್ಟ ಗಾಯಗಳೊಂದಿಗೆ ಗಂಭೀರ ಸ್ಥಿತಿಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆಯಲ್ಲಿದ್ದ ಮಹಿಳೆ ಮೃತಪಟ್ಟ ಘಟನೆ ನಡೆದಿದೆ.
ಕುಳೂರು ಪರಿಸರ ನಿವಾಸಿ ದಿವಂಗತ ಮದನಪ್ಪ ಶೆಟ್ಟಿ ಎಂಬವರ ಪತ್ನಿ ಸುನೀತ ಎಂ ಶೆಟ್ಟಿ (84) ನ.16ರಂದು ರಾತ್ರಿ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ಈ ತಿಂಗಳ 14ರಂದು ಮಧ್ಯಾಹ್ನ ಮನೆಯ ದೇವರ ಕೋಣೆಯಲ್ಲಿ ಪ್ರಾರ್ಥನೆ ನಡೆಸುತ್ತಿದ್ದ ವೇಳೆ ದೀಪದಿಂದ ಸಾರಿಗೆ ಬೆಂಕಿ ತಗಲಿದೆ. ಮನೆಯವರು ಕೂಡಲೇ ಬೆಂಕಿಯನ್ನು ನಂದಿಸಿದ್ದು, ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಮೃತರ ಮಕ್ಕಳಾದ ಮೋಹನದಾಸ್ ಶೆಟ್ಟಿ, ಯೋಗೀಶ ಶೆಟ್ಟಿ, ಸೊಸೆಯಂದಿರಾದ ಮಮತಾ, ಭಾರತಿ, ಪ್ರಫುಲ್ಲ, ಸಹೋದರಿ ರಾಜೀವಿ ಶೆಟ್ಟಿ ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಓರ್ವ ಪುತ್ರ ಚಂದ್ರಹಾಸ ಶೆಟ್ಟಿ ಈ ಹಿಂದೆ ನಿಧನರಾಗಿದ್ದಾರೆ.