ಮಂಜೇಶ್ವರ: ರೈಲ್ವೇ ಇಲಾಖೆಯ ಸ್ಥಳದಿಂದ ತೇಗಿನ ಮರ ಕಳವುಗೈದ ಪ್ರಕರಣಕ್ಕೆ ಸಂಬಂಧಿಸಿ ಓರ್ವನನ್ನು ಮಂಜೇಶ್ವರ ಪೋಲೀಸರು ಸೆರೆಹಿಡಿದಿದ್ದಾರೆ.
ಬಂಗ್ರಮಂಜೇಶ್ವರ ಚೆಕ್ಪೋಸ್ಟ್ ಬಳಿಯ ರಹ್ಮತ್ ಮಂಜಿಲ್ ನಿವಾಸಿ ಮೊಯಿದೀನ್ ಶಿಹಾದ್ ಸಿ.ಎಚ್ [32] ಎಂಬಾತ ಬಂಧಿತ ಆರೋಪಿ. ಕಳೆದ ಮಾರ್ಚ್ 10 ಹಾಗೂ 13ರ ಮಧ್ಯೆ ಮಂಜೇಶ್ವರ ಚೆಕ್ಪೋಸ್ಟ್ ಬಳಿಯಲ್ಲಿ ರೈಲ್ವೇ ಇಲಾಖೆಯ ಆಧೀನದಲ್ಲಿರುವ ಸ್ಥಳದಿಂದ ಭಾರೀ ಮೌಲ್ಯದ ತೇಗಿನ ಮರ ಕಳವಾಗಿತ್ತು.
ಈ ಬಗ್ಗೆ ರೈಲ್ವೇ ಅಧಿಕಾರಿಗಳು ನೀಡಿದ ದೂರಿನಂತೆ ಮಂಜೇಶ್ವರ ಪೋಲೀಸರು ಕೇಸು ದಾಖಲಿ ತನಿಖೆ ನಡೆಸಿದ್ದಾರೆ. ಈ ಪ್ರಕರಣದಲ್ಲಿ ಆರೋಪಿಯ ಕುರಿತು ಮಾಹಿತಿ ಸಂಗ್ರಹಿಸಿದ ಮಂಜೇಶ್ವರ ಠಾಣೆ ಯ ಇನ್ಸ್ಫೆಕ್ಟರ್ ಕೆ.ರಾಜೀವ್ ಕುಮಾರ್ ನೇತೃತ್ವದ ಪೋಲೀಸರು ಏಪ್ರಿಲ್ 16ರಂದು ಆರೋಪಿಯನ್ನು ಆತನ ಮನೆ ಪರಿಸರದಿಂದ ಸೆರೆಹಿಡಿದಿದ್ದಾರೆ.