
ಮಂಜೇಶ್ವರ : ಗೆಳೆಯನ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಬಂದಿದ್ದ ವ್ಯಕ್ತಿ ಔತಣ ಕೂಟದ ವೇಳೆ ಕುಸಿದು ಬಿದ್ದು ಮೃತ ಪಟ್ಟಿರುವ ಘಟನೆ ನಡೆದಿದೆ.
ಕೊಲ್ಲಿಯಿಂದ ಎರಡು ದಿನಗಳ ಹಿಂದೆ ಊರಿಗೆ ಬಂದಿದ್ದ ಮಂಜೇಶ್ವರ ಹತ್ತನೇ ಮೈಲು ಅಂಡರ್ ಪ್ಯಾಸೇಜ್ ಬಳಿಯ ನಿವಾಸಿ ದಿ.ಹಸೈನಾರ್ ಅವರ ಪುತ್ರ ಅಹಮ್ಮದ್ ಹಸನ್ ಯಾನೆ ನೌಮಾನ್ (25) ಮೃತ ವ್ಯಕ್ತಿ.ಮೀಂಜ ಮೂಡಂಬೈಲಿನಲ್ಲಿರುವ ಖಾಸಗಿ ರೆಸಾರ್ಟ್‌ನಲ್ಲಿ ಔತಣ ಕೂಡಾ ಏರ್ಪಾಡು ಮಾಡಲಾಗಿತ್ತು. ಔತಣ ಕೂಟದಲ್ಲಿ ಕುಸಿದು ಬಿದ್ದ ಅವರನ್ನು ಕೂಡಲೇ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ದರೂ ರಕ್ಷಿಸಲು ಸಾಧ್ಯವಾಗಲಿಲ್ಲ ಎಂದು ವರದಿಯಾಗಿದೆ.