ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವದ ಉದ್ಘಾಟನೆ

Share with

ಮಂಜೇಶ್ವರ: ಶಾಸ್ತ್ರೋತ್ಸವ ಎಂದಾಗ ನೆನಪಾಗುವುದು ನಮ್ಮ ರಾಷ್ಟ್ರಪತಿಗಳಾದ ಅಬ್ದುಲ್ ಕಲಾಂ. ಗ್ರಾಮೀಣ ಪ್ರತಿಭೆಯಾದ ಅವರು ವಿಜ್ಞಾನಿಯಾಗಿ ಬೆಳೆದು ಬಂದ ಬಗೆ ಬೆರಗು ಮೂಡಿಸುವಂತದ್ದು ಅಂತಹ ವಿಜ್ಞಾನಿಗಳ ರೂಪೀಕರಣಕ್ಕೆ ಇಂತಹ ಸ್ಪರ್ಧೆಗಳು ವೇದಿಕೆಯಾಗಲಿವೆ ಎಂಬುದಾಗಿ ಮಂಜೇಶ್ವರ ಶಾಸಕರಾದ ಶ್ರೀ ಎ.ಕೆ.ಎಂ ಅಶ್ರಫ್ ನುಡಿದರು.

ಅವರು ಜಿ.ವಿ.ಎಚ್.ಎಸ್.ಎಸ್ ಕುಂಜತ್ತೂರು ಶಾಲೆಯಲ್ಲಿ ಅ.30ರಂದು ಆರಂಭಗೊಂಡ ಮಂಜೇಶ್ವರ ಉಪಜಿಲ್ಲಾ ಮಟ್ಟದ ಶಾಸ್ತ್ರೋತ್ಸವದ ಉದ್ಘಾಟನೆಯನ್ನು ನಿರ್ವಹಿಸಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಜೀನ್ ಲವೀನ ಮೊಂತೆರೊ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು.

ಕಾಸರಗೋಡು ಜಿಲ್ಲಾ ಪಂಚಾಯತ್ ನ ವರ್ಕಾಡಿ ಡಿವಿಜನ್ ಸದಸ್ಯೆ ಶ್ರೀಮತಿ ಕಮಲಾಕ್ಷಿ.ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಮಂಜೇಶ್ವರ ಉಪಜಿಲ್ಲಾ ಪ್ರಭಾರ ಸಹಾಯಕ ವಿದ್ಯಾಧಿಕಾರಿಗಳಾದ ಶ್ರೀ ಜಿತೇಂದ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಮಂಜೇಶ್ವರ ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಶ್ರೀ ಮೊಹಮ್ಮದ್ ಸಿದ್ದಿಕ್.ಎಂ , ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯರಾದ ಶ್ರೀಮತಿ ಸಫಾ ಫಾರುಕ್, ಮಂಜೇಶ್ವರ ಗ್ರಾಮ ಪಂಚಾಯತ್ ಸದಸ್ಯರುಗಳಾದ ಶ್ರೀ ರಾಜೇಶ್.ಎಂ, ಶ್ರೀಮತಿ ಹಾಜಿರಾ ಮೂಸ, HM ಫಾರಂನ ಅಧ್ಯಕ್ಷರಾದ ಶ್ರೀ ಶ್ಯಾಮ ಭಟ್, ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷರಾದ ಶ್ರೀ ಅಬ್ದುಲ್ ರಹೆಮಾನ್ ಉದ್ಯಾವರ, ನಿವೃತ್ತ ಶಿಕ್ಷಕ ಶ್ರೀ ಈಶ್ವರ ಸರ್, ಹಿರಿಯ ಶಿಕ್ಷಕಿ ಶ್ರೀಮತಿ ಅಮಿತಾ ಕಾರ್ಯಕ್ರಮಕ್ಕೆ ಶುಭಹಾರೈಸಿದರು. ಸಂಘಟನಾ ಸಮಿತಿಯ ಸಂಚಾಲಕರೂ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ ಬಾಲಕೃಷ್ಣ.ಜಿ ಸ್ವಾಗತಿಸಿ, ವಿ.ಎಚ್.ಎಸ್.ಸಿ.ಪ್ರಾಚಾರ್ಯರಾದ ಶ್ರೀ ಶಿಶುಪಾಲನ್ ವಂದಿಸಿದರು. ಶಿಕ್ಷಕರುಗಳಾದ ಶ್ರೀ ಅಶ್ರಫ್, ಶ್ರೀ ದಿವಾಕರ ಬಲ್ಲಾಳ್,ಶ್ರೀಮತಿ ಕವಿತಾ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿನಿಯರು ಪ್ರಾರ್ಥನೆ ಸಲ್ಲಿಸಿದರು.


Share with

Leave a Reply

Your email address will not be published. Required fields are marked *