ಮಂಜೇಶ್ವರ: ಜಿಲ್ಲಾ ಪಂಚಾಯತ್ ಕಾಸರಗೋಡು, ಸಮಗ್ರ ಶಿಕ್ಷಾ ಕಾಸರಗೋಡು ಬಿ ಆರ್ ಸಿ ಮಂಜೇಶ್ವರದ ವತಿಯಿಂದ ‘ವೈವಿಧ್ಯ’ ವಿನೂತನ ಕಾರ್ಯಕ್ರಮ ಹೆದ್ದಾರಿ ಎ.ಯು.ಪಿ.ಎಸ್ ಶಾಲೆಯಲ್ಲಿ ಶಾಲಾ ಮ್ಯಾನೇಜರ್ ರಾಜೇಶ್ ಇವರ ಅಧ್ಯಕ್ಷತೆಯಲ್ಲಿ ಬಹಳ ವಿಜೃಂಭಣೆಯಿಂದ ಜರಗಿತು.
ಜಿಲ್ಲಾ ಪಂಚಾಯತಿನ ಸದಸ್ಯರಾದ ನಾರಾಯಣ ನಾಯ್ಕ್ ರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಂಜೇಶ್ವರ ಬಿ .ಆರ್.ಸಿ ಯ ಬಿ.ಪಿ.ಸಿ ಜೋಯ್ ಇವರು ಸ್ವಾಗತಿಸಿ ಕಾರ್ಯಕ್ರಮದ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಸದಸ್ಯರು, Z.A. ಕಯ್ಯಾರ್, ಶಾಲಾ ಮುಖ್ಯೋಪಾಧ್ಯಾಯರಾದ ಆದಿ ನಾರಾಯಣ ಭಟ್, ಪಿ.ಟಿ.ಎ ವೈಸ್ ಪ್ರೆಸಿಡೆಂಟ್ ಹರೀಶ್, ಆರೋಗ್ಯ ಇಲಾಖೆಯ ನಾರಾಯಣ ನಾಯ್ಕ್, ಪಿ.ಇ.ಸಿ ಸೆಕ್ರೆಟರಿ ಶಿವರಾಮ ಭಟ್, ಬಿ ಆರ್ ಸಿ ಯ ತರಬೇತುದಾರರಾದ ಸುಮಾ ದೇವಿ, ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು. ವಾರ್ಡ್ ಸದಸ್ಯರು ಮಂಜುನಾಥ ರವರು ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸುವುದರೊಂದಿಗೆ ಮುಗೇರ ಜನಾಂಗದ ಪರಂಪರಾಗತ ಕಲೆಯಾದ ಮಾದಿರಕಳಿಯ ಬಗ್ಗೆ, ಅದರ ಹಿನ್ನೆಲೆ ಅದು ಹುಟ್ಟಿಕೊಂಡ ರೀತಿ ಇತ್ಯಾದಿ ವಿಷಯಗಳ ಬಗ್ಗೆ ತಿಳಿಸಿದರು. ಆಗಮಿಸಿ ಅತಿಥಿಗಳನ್ನು ವೀಳ್ಯದೆಲೆ ಅಡಿಕೆ ನೀಡಿ ಸ್ವಾಗತಸಿದ್ದು, ಆಟಿ ತಿಂಗಳಲ್ಲಿ ಮನೆ ಮನೆಗೆ ಬೇಟಿ ನೀಡುವ ಆಟಿ ಕಳಂಜನ ವೇಷ ಈ ಕಾರ್ಯಕ್ರಮದ ವಿಶೇಷತೆಯಾಗಿತ್ತು. ಈ ಕಾರ್ಯಕ್ರಮದಲ್ಲಿ ಪ್ರತಿಭಾಕೆಂದ್ರದ ವಿದ್ಯಾರ್ಥಿಗಳು,ಸಹಾಯಕಿ ಜಾನಕಿ, ಶಾಲಾ ಶಿಕ್ಷಕ ವೃಂದ, ಸಿ.ಆರ್.ಸಿ.ಸಿ ಕಾರ್ಡಿನೇಟರ್ ಗಳು, ರಕ್ಷಕರು ಊರವರು ಭಾಗವಹಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಲಘು ಪಾನಿಯ ಹಾಗೂ ಉಪಹಾರವನ್ನು ನೀಡಲಾಯಿತು.
ಸಿ ಆರ್.ಸಿ.ಸಿ ಮೋಹಿನಿ ಕಾರ್ಯಕ್ರಮದ ನಿರೂಪಣೆಗೈದರು. ಶಾರದಾ ರವರು ಕಾರ್ಯಕ್ರಮಕ್ಕೆ ಧನ್ಯವಾದವನ್ನಿತ್ತರು.