ಕಾಸರಗೋಡು: ಮೀನುಗಾರರು ಬೀಸಿದ ಬಲೆಗೆ ಮೀನುಗಳ ಬದಲು ಮನುಷ್ಯನ ಶವ ಸಿಲುಕಿಕೊಂಡ ಘಟನೆ ಕಾಸರಗೋಡಿನ ಕಸಬ ಕಡಪ್ಪುರದಲ್ಲಿ ಸಂಭವಿಸಿದೆ.
ಕಸಬ ಕಡಪ್ಪುರದ ನಿವಾಸಿ ರಮೇಶನ್ ಅವರ ಪುತ್ರ ಆದಿತ್ಯ (22) ಅವರ ಮೃತದೇಹ ಎಂದು ಗುರುತು ಪತ್ತೆಯಾಗಿದೆ. ಮಂಗಳವಾರ ಸಂಜೆ ಮನೆಯಿಂದ ಹೊರಗೆ ಹೋಗಿದ್ದ ಅವರು ಮರಳಿ ಬಂದಿರಲಿಲ್ಲ. ಮೃತದೇಹದಲ್ಲಿ ಹಲ್ಲೆಯ ಗಾಯಗಳು ಕಂಡು ಬಂದಿದ್ದು, ನಿಗೂಢತೆಗೆ ಕಾರಣವಾಗಿದೆ.
ನಾಡದೋಣಿ ಮೀನುಗಾರರು ತಮ್ಮ ಬಲೆಗೆ ಬಿದ್ದ ಶವವನ್ನು ದಡಕ್ಕೆ ತಂದು ಪೊಲೀಸರಿಗೆ ಮಾಹಿತಿ ನೀಡಿದ್ದರು. ಕಾಸರಗೋಡು ಪೊಲೀಸರು ಮೃತದೇಹವನ್ನು ಕಣ್ಣೂರು ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಾಗಿಸಿದ್ದಾರೆ.
ಆದಿತ್ಯ ಅವರ ಕೊರಳಿನಲ್ಲಿದ್ದ ಚಿನ್ನದ ಸರ ಹಾಗೂ ಕೈಯಲ್ಲಿದ್ದ ಬಳೆ ನಾಪತ್ತೆಯಾಗಿದೆ ಎಂದು ಸ್ಥಳೀಯರು ಹೇಳಿದ್ದಾರೆ. ಅವರು ಬಳಸುತ್ತಿದ್ದ ಬೈಕ್ ಹಾಗೂ ಮೊಬೈಲ್ ಫೋನ್ ಪರಿಸರದಲ್ಲಿ ಪತ್ತೆಯಾಗಿವೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ