ಇಂದಿನಿಂದ ರಾಜ್ಯ ಸರ್ಕಾರದ ಹಲವು ನಿಯಮಗಳು ಜಾರಿ..! ಯಾವುದೆಲ್ಲ ಹೆಚ್ಚಳ

Share with

ಜನಸಾಮಾನ್ಯರಿಗೆ ಬಿಸಿ ಮುಟ್ಟಲಿದೆಯೇ ರಾಜ್ಯ ಸರ್ಕಾರದ ಈ ಹೊಸ ನಿಯಮ!!

ಬೆಂಗಳೂರು : ಹೊಸ ರಾಜ್ಯ ಸರ್ಕಾರ 5 ಯೋಜನೆಗಳನ್ನ ತಂದಿದ್ದು ಆಗಸ್ಟ್ ಒಂದರಂದು ಇದರ ಹೊಸ ಹಲವು ನಿಯಮಗಳು ಜಾರಿಗೊಳ್ಳಲಿದೆ ಆ. 1ರ ಇಂದಿನಿಂದ ಹಲವು ಹೊಸ ನಿಯಮಗಳು ಜಾರಿಗೊಳ್ಳಲಿದೆ. ಜನಜೀವನದ ಮೇಲೆ ಪರಿಣಾಮ ಬೀರುವ ಸರ್ಕಾರದ ಒಂದಷ್ಟು ತೀರ್ಮಾನಗಳು ಇಂದಿನಿಂದ ಜಾರಿಗೆ ಬರಲಿದೆ. ಕೆಲವು ತೀರ್ಮಾನ ಸಮಾಧಾನ ತಂದರೇ, ಮತ್ತೆ ಕೆಲವು ಬಿಸಿ ಮುಟ್ಟಿಸಲಿವೆ. ಹೊಸ ಸರ್ಕಾರದ ಗೃಹ ಜ್ಯೋತಿಯ ಅನುಭವ ಆಗಸ್ಟ್ ತಿಂಗಳ ಇಂದಿನಿಂದ ಜನಸಾಮಾನ್ಯರ ಅರಿವಿಗೆ ಬರಲಿದೆ.

ಇಂದಿನಿಂದ ವಿವಿಧ ನಿಯಮಗಳಲ್ಲಿ ಬದಲಾವಣೆಯಾಗಲಿವೆ. ಹಲವು ದುಬಾರಿಯಾದ್ರೆ, ಮತ್ತೆ ಕೆಲವು ಖುಷಿ ನೀಡುವಂತ ಸಂಗತಿಗಳು ಇದ್ದಾವೆ. ಆದಾಯ ತೆರಿಗೆ ಪಾವತಿಯ ಗಡುವು ಮುಕ್ತಾಯಗೊಂಡಿದೆ. ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಕರೆಂಟ್ ಫ್ರೀ ಆಗಲಿದೆ.

ವಿದ್ಯುತ್ ಉಚಿತ:

ಆಗಸ್ಟ್ 1ರಿಂದ ರಾಜ್ಯ ಕಾಂಗ್ರೆಸ್ ಸರ್ಕಾರ ಘೋಷಣೆ ಮಾಡಿದಂತೆ ಜೂ.18ರಿಂದ ಜು.27ರ ಒಳಗಾಗಿ ನೋಂದಾಯಿಸಿಕೊಂಡ ಗ್ರಾಹಕರಿಗೆ ವಿದ್ಯುತ್ ಉಚಿತವಾಗಲಿದೆ. 200 ಯೂನಿಟ್ ವರೆಗೆ ಗೃಹ ಜ್ಯೋತಿ ಯೋಜನೆಯ ಅಡಿಯಲ್ಲಿ ಉಚಿತ ವಿದ್ಯುತ್ ಸೌಲಭ್ಯ ದೊರೆಯಲಿದೆ.

ಶೇ.10ರಷ್ಟು ಹೋಟೆಲ್ ತಿನಿಸಿ ದುಬಾರಿ

ದಿನೇ ದಿನೇ ಹೆಚ್ಚಳವಾಗುತ್ತಿರುವಂತ ಅಗತ್ಯ ವಸ್ತುಗಳ ಬೆಲೆಯ ಕಾರಣದಿಂದ ನೀವು ರುಚಿ ರುಚಿಯಾಗಿ ಸವಿಯುವಂತ ಹೋಟೆಲ್ ತಿಂಡಿ-ತಿನಿಸುಗಳು ದುಬಾರಿಯಾಗಲಿವೆ. ಆ. 1ರ ಇಂದಿನಿಂದ ಜಾರಿಗೆ ಬರುವಂತೆ ಶೇ.10ರಷ್ಟು ತಿನಿಸುಗಳ ಬೆಲೆ ಹೆಚ್ಚಳವಾಗಲಿದೆ.

ಹಾಲಿನ ದರ 3 ರೂ ಹೆಚ್ಚಳ

ಇಂದಿನಿಂದ ನಂದಿನಿ ಹಾಲಿನ ದರ 3 ರೂ ಹಚ್ಚಳವಾಗಲಿದೆ. ಹಾಲು
ಉತ್ಪಾದಕರ ಒಕ್ಕೂಟದ ಒತ್ತಡಕ್ಕೆ ಮಣಿದಿರುವಂತ ರಾಜ್ಯ ಸರ್ಕಾರ, ಈ ನಿರ್ಧಾರವನ್ನು ಕೈಗೊಂಡಿದೆ. ಹಾಲು ಮಹಾಮಂಡಳದಲ್ಲಿ ಪ್ರತಿ ಲೀಟರ್ ಹಾಲಿಗೆ ಒಂದೊಂದು ದರ ಇದ್ದು, ಹಾಲಿನ ದರಕ್ಕೆ ಹೆಚ್ಚುವರಿ ಮೂರು ರೂ. ಸೇರಿಸಿ ಇಂದಿನಿಂದ ಮಾರಾಟವಾಗಲಿದೆ. ಆದರೇ ಈ ಹೆಚ್ಚುವರಿ ದರ ಹಾಲು ಉತ್ಪಾದಕರಿಗೆ ನೀಡಬೇಕು ಎಂಬುದಾಗಿ ಸರ್ಕಾರ ಷರತ್ತು ವಿಧಿಸಿದೆ.

ರಾಜ್ಯ ವಿಧಾನಸಭೆಯಲ್ಲಿ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ತಿದ್ದುಪಡಿ ವಿಧೇಯಕವನ್ನು ಮಂಡಿಸಿ ಉಭಯ ಸದನಗಳಲ್ಲೂ ಒಪ್ಪಿಗೆ ಪಡೆಯಲಾಗಿತ್ತು ಇದಕ್ಕೆ ರಾಜ್ಯವಾರು ಅಂಕಿತ ಕೂಡ ಹಾಕಿದ್ದಾರೆ. ಈ ತಿದ್ದುಪಡಿ ನಿಯಮದಂತೆ ಮೋಟಾರು ವಾಹನಗಳ ತೆರಿಗೆ ದರಗಳು ಹೆಚ್ಚಾಗಲಿವೆ. ಅತಿ ಭಾರದ ಸರಕು ವಾಹನಗಳು, ಮೋಟಾರು ಕ್ಯಾಬ್, ಶಾಲಾ ಕಾಲೇಜು ವಾಹನಗಳ ತೆರಿಗೆ ಹೆಚ್ಚಳವಾಗಲಿದೆ. ಶಾಲಾ ಮಕ್ಕಳು ತೆರಳುವ ಶಾಲೆಯ ಒಡೆತನದ ವಾಹನಗಳ ಪ್ರತಿ ಚದರ ಮೀಟರ್ ತೆರಿಗೆಯನ್ನು 20 ರೂ. ನಿಂದ 100ಕ್ಕೆ ಏರಿಕೆ ಮಾಡಲಾಗಿದೆ.

ಐಟಿಆರ್ ವೈಫಲ್ಯಕ್ಕೆ ಇಂದಿನಿಂದ ದಂಡ ಫಿಕ್ಸ್:

ನೀವು ಆದಾಯ ತೆರಿಗೆ ಪಾವತಿದಾರರು ಆಗಿದ್ದರೇ, ಜು.31ರ ಒಳಗಾಗಿ ಪಾವತಿಸದೇ ಇದ್ದರೇ, ಇಂದಿನಿಂದ ದಂಡ ಪಾವತಿಸುವುದು ಫಿಕ್ಸ್ ಆಗಿದೆ. ನಿಗದಿತ ಅವಧಿಯ ಒಳಗಾಗಿ ಐಟಿಆರ್ ಫೈಲ್ ಮಾಡದೇ ಇದ್ದವರು 5,000 ರೂ. ದವರೆಗೆ ದಂಡ ತೆರಬೇಕಿದೆ.

ರಾಜ್ಯದಲ್ಲಿ ಎತ್ತರದ ಕಟ್ಟಡಕ್ಕೆ ಶುಲ್ಕ:
ಇನ್ನೂ ಕರ್ನಾಟಕ ಅಗ್ನಿಶಾಮಕ ದಳ (ತಿದ್ದುಪಡಿ)ಅಧಿನಿಯಮ 2023ರಕ್ಕೆ ಶಾಸನಸಭೆ ಒಪ್ಪಿಗೆ ನೀಡಲಾಗಿತ್ತು. ಇದು ರಾಜ್ಯಪತ್ರದಲ್ಲಿ ಕೂಡಪ್ರಕಟಲಾಗಿದೆ. ಈ ಹಿನ್ನಲೆಯಲ್ಲಿ ಇನ್ಮುಂದೆ ರಾಜ್ಯ ಅಗ್ನಿಶಾಮ ಮತ್ತು ತುರ್ತು ಸೇವೆಗಳ ಇಲಾಖೆಯಿಂದ ನಿರಾಕ್ಷೇಪಣಾ ಪತ್ರ ಪಡೆಯಬೇಕಾಗಿದೆ. ಅಂದರೆ ರಾಷ್ಟ್ರೀಯ ಕಟ್ಟಡ ಸಂಹಿತೆಯಲ್ಲಿ ಎತ್ತರದ ಕಟ್ಟಡ ಅಂದರೇ ಯಾವುದೆಂದು ಪ್ರಸ್ತಾಪವಿದೆ. ಅದರ ಪ್ರಕಾರ ನಿರಾಕ್ಷೇಪಣಾ ಪತ್ರ ಪಡೆಯುವಾಗ ನಿಯಮ ಪಾಲಿಸುವ ಜತೆ, ಕಟ್ಟ ಮಾಲೀಕರು ಶುಲ್ಕವನ್ನು ಕಟ್ಟಬೇಕಾಗುತ್ತದೆ.


Share with

Leave a Reply

Your email address will not be published. Required fields are marked *