ದುಬೈ : ಮಾರ್ಗದೀಪ ಸಾಂಸ್ಕೃತಿಕ ಸಮಿತಿಯ ವತಿಯಿಂದ ದಿ | ಶ್ರೀ ವಸಂತ ಬೇಕಲ್ ಅವರ ಸವಿನೆನಪಿಗಾಗಿ “ಮಾರ್ಗದೀಪ ಪ್ರೀಮಿಯರ್‌ಲೀಗ್’ ಕ್ರಿಕೆಟ್ ಪಂದ್ಯಾಟ ಇತ್ತೀಚೆಗೆ ಶಾರ್ಜಾದ ಎನ್ ಎಎಸ್ ಎಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಅದ್ದೂರಿಯಿಂದ ಜರುಗಿತು.

ಪಂದ್ಯಾಟದಲ್ಲಿ ಮಂಜುನಾಥ ಕಾಸರಗೋಡು ಹಾಗೂ ದಾಮೋದರ ರಾವ್ ಅವರ ಮಾಲಕತ್ವದ ಗಡಿನಾಡು ಸ್ಟೈಕರ್ ರಘುನಾಥ್ ಎಂ. ಹಾಗೂ ಬಿಪಿನ್ ಚಂದ್ರ ನಾಯಕ ಮಾಲಕತ್ವದ ಬೇಕಲ್ ಫೋರ್ಟ್ ರೈಡರ್ಸ್, ಶ್ರೀಪತಿ ಕೆ. ಹಾಗೂ ಕಮಲಾಕ್ಷ ಕೆ. ಮಾಲಕತ್ವದ “ಕ್ಷತ್ರಿಯ ಲೆಜೆಂಡ್ಸ್’ ಹಾಗೂ ನರೇಶ್ ಸಿ. ಎಚ್. ಹಾಗೂ ಧನಂಜಯ ಸಿ. ಎಚ್. ಮಾಲಕತ್ವದ “ಕೋಟೆ ಹೀರೋಸ್’ ಎಂಬ ನಾಲ್ಕು ತಂಡಗಳು ಭಾಗವಹಿಸಿದ್ದವು. ಪಂದ್ಯಾಟದ ಮುಖ್ಯ ಸಂಘಟಕರರಾಗಿ ಸುಧೀರ್ ಎಸ್. ಹಾಗೂ ಸುಬ್ರಹ್ಮಣ್ಯ ಬಿ.ಕೆ.ಯವರು ಕಾರ್ಯ ನಿರ್ವಹಿಸಿದರು.
ಸಂಘದ ಅಧ್ಯಕ್ಷರಾದ ಮಹೇಶ್ ಚಂದ್ರಗಿರಿ, ಕಾರ್ಯದರ್ಶಿ ಸುನಿಲ್ ರಾವ್ ಹೇರೂರು, ಉಪಾಧ್ಯಕ್ಷರಾದ ಪ್ರವೀಣ್ ಉಪ್ಪರು, ಕೋಶಾಧಿಕಾರಿಯಾದ ರಾಜೇಶ್ ರಾವ್, ಜತೆ ಕಾರ್ಯದರ್ಶಿ ಬಿಪಿನ ಚಂದ್ರ ನಾಯಕ ಹಾಗೂ ಕ್ರೀಡಾ ಕಾಯದರ್ಶಿ ಸುಬ್ರಹ್ಮಣ್ಯ ಬಿ. ಕೆ.ರವರು ಉಪಸ್ಥಿತರಿದ್ದರು.
ಪಂದ್ಯಾಟದ ಚಾಂಪಿಯನ್ಸ್ ತಂಡವಾಗಿ ಬೇಕಲ್ ಫೋರ್ಟ್ ರೈಡರ್ಸ್ ಹಾಗೂ ರನ್ನರ್ ಅಪ್ ಆಗಿ ಕೋಟೆ ಹೀರೋಸ್ ತಂಡ ಹೊರಹೊಮ್ಮಿತು. ಸುಗಂಧರಾಜ ಬೇಕಲ್ ಅವರು ಸ್ವಾಗತಿಸಿದರು. ಅಜಿತ್ ಕೊರಕೋಡು ಹಾಗೂ ಸತೀಶ್ ಹಂಗಳೂರು ಮುಖ್ಯ ಸಲಹೆಗಾರರಾಗಿದ್ದರು. ಹರಿಪ್ರಸಾದ್ ಕೋಟೆ ಕಾರ್ಯಕ್ರಮದ ನಿರೂಪಕರಾಗಿದ್ದರು.




