ಅಮೆರಿಕದ ಟೆಕ್ಸಾಸ್ನಲ್ಲಿ ಭೀಕರ ಪ್ರವಾಹ ಭಾರೀ ವಿನಾಶ ಸೃಷ್ಟಿಸಿದ್ದು, ಸಾವಿನ ಸಂಖ್ಯೆ 104ಕ್ಕೆ ತಲುಪಿದೆ. ಪ್ರವಾಹ ತೀವ್ರವಾಗಿದ್ದ ಕೆರ್ ಕೌಂಟಿ ಪ್ರದೇಶದಲ್ಲಿ 84 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 32 ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ.


ಡಜನ್ಗಟ್ಟಲೆ ಕಾರುಗಳು ಪ್ರವಾಹದ ನೀರಿನಲ್ಲಿ ಕೊಚ್ಚಿಹೋಗಿವೆ. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಮತ್ತೊಂದೆಡೆ, ಪಾಕಿಸ್ತಾನದಲ್ಲಿ ಪ್ರವಾಹಕ್ಕೆ 72 ಮಂದಿ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.




