ಕೇರಳ ಲಾಟರಿ ಹೆಸರಿನಲ್ಲಿ ಭಾರೀ ಮೋಸ..!

Share with

ರೋಣ: ಕೇರಳ ಲಾಟರಿ ಹೆಸರಿನಲ್ಲಿ ವಂಚನೆ ಮಾಡುವ ಜಾಲ ಸಕ್ರೀಯವಾಗಿದ್ದು ರೋಣ ತಾಲೂಕಿನ ಹಲವು ಮಂದಿ ಹಣ ಕಳೆದುಕೊಳ್ಳುತ್ತಿರುವುದು ಬೆಳಕಿಗೆ w໐໖໖.

ಮೊದಲಿಗೆ ಮೊಬೈಲ್ ಸಂಖ್ಯೆಗೆ ವಂಚಕರು ಮೆಸೇಜ್ ಮಾಡಿ, ಲಾಟರಿ ಇದೆ, ಯಾವ ನಂಬ‌ರ್ ಬೇಕು ಎಂದು ಕೇಳುತ್ತಾರೆ. ನಂತರ 40 ರೂ. ಹಣ ಹಾಕಲು ಹೇಳಿ, ಕೆಲ ಹೊತ್ತಿನ ಬಳಿಕ 1 ಲಿಂಕ್ ಕಳುಹಿಸಿ, ಅದರಲ್ಲಿ ನಮ್ಮ ನಂಬರ್ ಹಾಕಲು ಹೇಳಿ ಬಳಿಕ ಲಾಟರಿ ನಂಬ‌ರ್ ಗೆದ್ದಿದೆ ಎಂದು ಮೆಸೇಜ್ ಬರುತ್ತದೆ. ನಂತರ ಮೆಸೇಜ್ ಮಾಡಿ ನಂಬರ್ ಸ್ಟ್ರೀನ್ ಶಾಟ್ ಕಳುಹಿಸಲು ಹೇಳುತ್ತಾರೆ. ಬಳಿಕ ಅಭಿನಂದನೆ ಮೆಸೇಜ್ ಮಾಡಿ ಪ್ರಕ್ರಿಯೆಗಾಗಿ 8 ಸಾವಿರ ರೂ ಹಣ ಕಟ್ಟಲು ಹೇಳುತ್ತಾರೆ. ಕೊಟ್ಟರೆ ಸಾಧ್ಯವಾದಷ್ಟು ಹಣ ಪಡೆದು ಮೋಸ ಮಾಡುತ್ತಾರೆ ಎಂದು ಹಣ ಕಳೆದುಕೊಂಡ ವ್ಯಕ್ತಿಯೊಬ್ಬರಿಂದ ಮಾಹಿತಿ ಲಭಿಸಿದೆ.

ಭಾರತ ಸರ್ಕಾರದ ಲಾಂಛನ ಉಳ್ಳ ಪ್ರಮಾಣ ಪತ್ರ:

ಲಾಟರಿ ಆಡಿದ ವ್ಯಕ್ತಿಯ ಹೆಸರು ಹಾಗೂ ಗೆದ್ದ ಹಣದ ಮೊತ್ತ ಹೊಂದಿದ ಪ್ರಮಾಣ ಪತ್ರವನ್ನು ತಕ್ಷಣವೇ ಮೆಸೇಜ್ ಮಾಡುತ್ತಾರೆ. ಹೀಗಾಗಿ ಇದು ಸರಕಾರದಿಂದ ನಡೆಯುವ ಲಾಟರಿ ವ್ಯವಹಾರ ಇರಬಹುದು ಎಂದು ಹಲವರು ಮೋಸ ಹೋಗುತ್ತಿರುವುದು ಬೆಳಕಿಗೆ ಬಂದಿದೆ.


Share with

Leave a Reply

Your email address will not be published. Required fields are marked *