ಮಂಗಳೂರು: ತೊಕ್ಕೊಟ್ಟು ಒಳಪೇಟೆಯ ರೈಲ್ವೆ ಟ್ರಾಕ್ ಬಳಿ ಮಟ್ಕಾ ದಂಧೆಯಲ್ಲಿ ತೊಡಗಿಸಿಕೊಂಡಿದ್ದ ನಾಲ್ಕು ಮಂದಿಯನ್ನು ಉಳ್ಳಾಲ ಠಾಣೆಯ ಪೊಲೀಸರು ಬಂಧಿಸಿದ್ದು, ಆರೋಪಿಗಳಿಂದ ಮಟ್ಕಾ ಚೀಟಿ ಮತ್ತು 3,260 ರೂಪಾಯಿಗಳನ್ನು ವಶಪಡಿಸಿಕೊಳ್ಳಲಾಗಿದೆ.


ಉಳ್ಳಾಲಬೈಲ್‌ನ ಮಧುಸೂದನ್ (50), ತೌಡುಗೋಳಿ ಕ್ರಾಸ್‌ನ ಮುಸ್ತಫಾ (50), ಪೆರ್ಮನ್ನೂರು ಗ್ರಾಮದ ಫಕೀರಪ್ಪ (38), ದೇರಳಕಟ್ಟೆಯ ಖಾದಿರ್ ಮೊಯ್ದಿನ್ (65) ಬಂಧಿತ ಅರೋಪಿಗಳು. ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




