ಹೊಸಂಗಡಿಯಲ್ಲಿ ಎಸ್.ಡಿ.ಟಿ.ಯು ನಿಂದ ಮೇ ದಿನ ಆಚರಣೆ

Share with

ಮಂಜೇಶ್ವರ: ಎಸ್.ಡಿ.ಟಿ.ಯು ವತಿಯಿಂದ [ಮೇ ದಿನ] ಕಾರ್ಮಿಕರ ದಿನಾಚರಣೆಯನ್ನು ವಿವಿಧ ಕಾರ್ಯಕ್ರಮಗಳೊಂದಿಗೆ ಹೊಸಂಗಡಿಯಲ್ಲಿ ಆಚರಿಸಲಾಯಿತು. ಆರಂಭದಲ್ಲಿ ಹೊಸಂಗಡಿಯಲ್ಲಿ ಟೆಂಪೋ ಹಾಗೂ ಅಟೋರಿಕ್ಷಾ ನಿಲ್ದಾಣಗಳಲ್ಲಿ ಕುಡಿನೀರಿನ ವ್ಯವಸ್ಥೆಯನ್ನು ಎಸ್.ಡಿ.ಟಿ.ಯು ರಾಜ್ಯ ಅಧ್ಯಕ್ಷ ಗ್ರೋ ವಾಸು ಉದ್ಘಾಟಿಸಿದರು. ಬಳಿಕ ತಲಪಾಡಿಯಿಂದ ಹೊಸಂಗಡಿ ತನಕ ನಡೆದ ವಾಹನ ರ‍್ಯಾಲಿಯನ್ನು ಸಂಘಟನೆಯ ಕರ್ನಾಟಕ ರಾಜ್ಯ ಕಾರ್ಯದರ್ಶಿ ಕಾದರ್ ಮಂಗಳೂರು ಉದ್ಘಾಟಿಸಿದರು. ಬಳಿಕ ಹೊಸಂಗಡಿ ಹಿಂದುಸ್ಥಾನ ಹಾಲ್ ನಲ್ಲಿ ನಡೆದ ಸಮಾರಂಭದಲ್ಲಿ ಕಿಡ್ನಿ ಅಸೌಖ್ಯದಿಂದ ಬಳಲುತ್ತಿರುವ ಓರ್ವ ಅಟೋರಿಕ್ಷಾ ಚಾಲಕನಿಗೆ ಚಿಕಿತ್ಸಾ ಸಹಾಯಧನವನ್ನು ಹಸ್ತಾಂತರಿಸಿದರು. ಬಳಿಕ ಹತ್ತು ಹಿರಿಯ ಚಾಲಕರಿಗೆ ಹಾಗೂ ಉನ್ನತ ವಿದ್ಯಾಭ್ಯಾಸ ಮಾಡುತ್ತಿರುವ ಕಾರ್ಮಿಕರ ಮಕ್ಕಳನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮವನ್ನು ರಾಜ್ಯ ಅಧ್ಯಕ್ಷ ಗ್ರೋ ವಾಸು ಉದ್ಘಾಟಿಸಿದರು. ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಎನ್.ಅಬ್ದುಲ್ಲ ಹಮೀದ್ ವಹಿಸಿದರು. ನೇತಾರರಾದ ಅಬ್ದುಲ್ ಕಾದರ್ ಪರಂಗಿ ಪೇಟೆ, ಇಕ್ಬಾಲ್, ಅನ್ಸಾರ್ ವ್ಯಾಪಾರಿ ಸಮಿತಿಯ ನೇತಾರ ಬಶೀರ್ ಕನಿಲ ಶುಭ ಹಾರೈಸಿದರು. ರಹೀಮ್, ಇಬ್ರಾಹಿಂ, ತಾಜುದ್ದೀನ್ ಅಶ್ರಫ್, ಮುನೀರ್, ನಿಜಾರ್ ಮೊದಲಾದವರು ನೇತೄತ್ವ ನೀಡಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಕಾದರ್ ಸ್ವಾಗತಿಸಿದರು.


Share with

Leave a Reply

Your email address will not be published. Required fields are marked *