ಕಾಸರಗೋಡು: ಇಲ್ಲಿನ ದೇಲಂಪಾಡಿ ಪಂಚಾಯತ್ ವ್ಯಾಪ್ತಿಯ ಪರಪ್ಪ ಮಯ್ಯಾಳದಲ್ಲಿಸತ್ಯನಾರಾಯಣ ಭಜನಾ ಮಂದಿರದ ಪುನಃ ಪ್ರತಿಷ್ಠಾ ಮಹೋತ್ಸವ ಜ.16 ಮತ್ತು 17 ಜರಗಿತು. ಜ.16 ರಂದು ಬೆಳಿಗ್ಗೆ ಹಸಿರು ಹೊರೆಕಾಣಿಕೆ ಸಮರ್ಪಣೆ, ಸಂಜೆ ತಂತ್ರಿಯವರಿಂದ ಸ್ಥಳ ಶುದ್ಧಿ ವಾಸ್ತು ಹೋಮ ಹಾಗೂ ಪೂಜಾ ವಿಧಿವಿಧಾನ ಜರಗಿತು.


ಜ.17ರಂದು ಬೆಳಿಗ್ಗೆ ಗಣಪತಿ ಹೋಮ ನಡೆದು ಸತ್ಯನಾರಾಯಣ ದೇವರ ಪ್ರತಿಷ್ಟೆ, ಮಹಾಪೂಜೆ, ದೀಪಪ್ರತಿಷ್ಠೆಯಾದ ಬಳಿಕ ಭಜನೆ ಪ್ರಾರಂಭಗೊಂಡಿತು.

ಮಧ್ಯಾಹ್ನ ಮಹಾಪೂಜೆ ನಡೆದು ಅನ್ನಸಂತರ್ಪಣೆ ನಡೆಯಿತು. ಸಂಜೆ ಭಜನಾ ಮಂಗಲೋತ್ಸವ, ಮಹಾಪೂಜೆ, ದೀಪಸ್ತಂಭನ ಪ್ರಸಾದ ವಿತರಣೆ ನಡೆದ ಬಳಿಕ ಮೂಕಾಂಬಿಕಾ ಕಲ್ಚರಲ್ ಅಕಾಡಮಿಯವರಿಂದ ಭರತನಾಟ್ಯ ಹಾಗೂ ಸ್ಥಳೀಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು.





